ಕುನ್ನಿಕ್ಕೋಡ್, ಜೂ 02 (DaijiworldNews/HR): ಕೇರಳದ ಕುನ್ನಿಕ್ಕೋಡ್ನಲ್ಲಿ ವಿದ್ಯಾರ್ಥಿನಿಯೊಬ್ಬಳು ಎಸ್ಸೆಸ್ಸೆಲ್ಸಿ ಪರೀಕ್ಷೆಯ ಎಲ್ಲ ವಿಷಯಗಳಲ್ಲಿ ಎ + ಮಾರ್ಕ್ಸ್ ತೆಗೆದುಕೊಂಡು ಡಿಸ್ಟಿಂಕ್ಷನ್ನಲ್ಲಿ ಪಾಸ್ ಆಗಿದ್ದು ಬಳಿಕ ಪ್ರಥಮ ಪಿಯು ಪರೀಕ್ಷೆಯಲ್ಲಿ ಫೇಲಾಗುತ್ತೇನೆ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿಯನ್ನು ಸಾನಿಗಾ (17) ಎಂದು ಗುರುತಿಸಲಾಗಿದೆ.
ಆಕೆಯ ತಾಯಿ ಅನಿತಾ ಮನ್ನಾರ್ನಲ್ಲಿ ಕೆಲಸ ಮಾಡುತ್ತಿದ್ದು, ವಾರಕ್ಕೊಮ್ಮೆ ಥಲವೂರ್ಗೆ ಬರುತ್ತಾರೆ. ಸನಲ್ ಕಾರ್ಪೆಂಟರ್ ಆಗಿದ್ದು, ಮನೆಗೆ ಬರುವುದು ರಾತ್ರಿ 8 ಗಂಟೆಯಾಗುತ್ತದೆ. ಬುಧವಾರ ರಾತ್ರಿ ಅನಿತಾ, ತಮ್ಮ ಮಗಳಿಗೆ ಕರೆ ಮಾಡಿದ್ದಾರೆ. ಆದರೆ, ಎಷ್ಟು ಬಾರಿ ಮಾಡಿದರೂ ಆಕೆ ಸ್ವೀಕರಿಸದಿದ್ದಾಗ, ನೆರೆಮನೆಯವರಿಗೆ ಫೋನ್ ಮಾಡಿದ್ದಾರೆ. ನೆರೆ ಮನೆಯವರು ಅನಿತಾ ಅವರ ಮನೆಯ ಬಳಿ ಬಂದಾಗ ಬಾಗಿಲು ಹಾಕಿತ್ತು. ಪರಿಶೀಲಿಸಿದಾಗ ಒಳಗಿನಿಂದ ಬಾಗಿಲು ಲಾಕ್ ಆಗಿರುವುದು ನೆರೆಮನೆಯವರಿಗೆ ತಿಳಿಯುತ್ತದೆ. ಬಳಿಕ ಬಾಗಿಲನ್ನು ಮುರಿದು ಒಳಗೆ ನೋಡಿದಾಗ ಸಾನಿಗಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇನ್ನು ಮನೆಯಲ್ಲಿ ಡೆತ್ನೋಟ್ ಸಹ ಪತ್ತೆಯಾಗಿದೆ. ಪ್ರಥಮ ಪಿಯು ಪರೀಕ್ಷೆಯಲ್ಲಿ ಫೇಲಾಗುತ್ತೇನೆ ಎಂಬ ಭಯದಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸಾನಿಗಾ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾಳೆ.