ನವದೆಹಲಿ, ಜೂ 02 (DaijiworldNews/MS): ಕಳುಹಿಸಿದ ಯಾವುದಾದರೊಂದು ಸಂದೇಶ ತಪ್ಪಾದರೆ ಅದನ್ನು ತಕ್ಷಣ ಡಿಲೀಟ್ ಮಾಡಬಹುದಾದ ಆಯ್ಕೆ ಈ ಹಿಂದೆ ವಾಟ್ಸ್ಆಯಪ್ ಕೊಟ್ಟಿತ್ತು. ಇದೀಗ ಇನ್ನು ಮುಂದುವರಿದು ಸಂಸ್ಥೆಯು ಸಂದೇಶಗಳನ್ನು ಎಡಿಟ್ ಮಾಡುವ ಸೌಲಭ್ಯ ನೀಡಲೆಂದು ಕೆಲಸ ಮಾಡುತ್ತಿದೆ. ಈ ಆಯ್ಕೆಯೂ ಸದ್ಯದಲ್ಲೇ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು “Wabetainfo” ವರದಿ ಮಾಡಿದೆ.
WhatsApp ಐದು ವರ್ಷಗಳ ಹಿಂದೆ ಈ ವೈಶಿಷ್ಟ್ಯದ ಬಗ್ಗೆ ಕೆಲಸ ಮಾಡಲು ಪ್ರಾರಂಭಿಸಿತು ಆದರೆ ನಂತರ ಯೋಜನೆಯನ್ನು ರದ್ದುಗೊಳಿಸಲಾಯಿತು. ಈಗ, ಇನ್ಸ್ಟಂಟ್ ಮೆಸೇಜಿಂಗ್ ಪ್ಲಾಟ್ಫಾರ್ಮ್ ಎಡಿಟ್ ಮೆಸೇಜ್ ಬಟನ್ ಗಾಗು ಮತ್ತೆ ಕಾರ್ಯನಿರ್ವಹಿಸುತ್ತಿದೆ/
ಟಾಪ್ ಬಾರ್ನಲ್ಲಿ ಮೀಸಲಾದ ಬಟನ್ನಂತೆ ಈ ಆಯ್ಕೆಯೂ ಕೂಡ ಕಂಡುಬರಬಹುದಾಗಿದೆ ಅಥವಾ ನಕಲಿಸಲು ಮತ್ತು ಸಂದೇಶವನ್ನು ದೀರ್ಘವಾಗಿ ಒತ್ತಿದಾಗ ಸಂದೇಶವನ್ನು ಫಾರ್ವರ್ಡ್ ಮಾಡುವ ಆಯ್ಕೆಗಳ ಜೊತೆಗೆ ಎಡಿಟ್ ಬಟನ್ ತೋರಿಸಬಹುದಾಗಿದೆ
2022ರ ಎ. 1ರಿಂದ ಎ. 30ರ ವರೆಗೆ 16 ಲಕ್ಷ ಭಾರತೀಯರ ವಾಟ್ಆಯಪ್ ಖಾತೆ ಗಳನ್ನು ನಿಷೇಧಿಸಿರುವುದಾಗಿ ವಾಟ್ಸ್ಆಯಪ್ ಸಂಸ್ಥೆ ಬುಧವಾರ ತಿಳಿಸಿದೆ. 2021ರ ಐಟಿ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಖಾತೆಗಳನ್ನು ನಿಷೇಧಿಸಿರುವುದಾಗಿ ತಿಳಿಸಲಾಗಿದೆ.