ಜಮ್ಮು ಕಾಶ್ಮೀರ, ಜೂ 02 (DaijiworldNews/HR): ಖಾಸಗಿ ಬಾಡಿಗೆ ವಾಹನವೊಂದರೊಳಗೆ ಸ್ಫೋಟ ಸಂಭವಿಸಿ ಮೂವರು ಯೋಧರು ಗಾಯಗೊಂಡಿದ್ದು, ಯೋಧರನ್ನು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಸೆಡೋವ್ನಲ್ಲಿ ನಡೆದಿದೆ.
ಗುರುವಾರ ಬೆಳಗ್ಗೆ ಟಾಟಾ ವಾಹನದಲ್ಲಿ ನಿಗೂಢ ಸ್ಫೋಟ ಸಂಭವಿಸಿದ್ದು, ವಾಹನದ ಬ್ಯಾಟರಿಯಲ್ಲಿನ ಅಸಮರ್ಪಕ ಕಾರ್ಯದಿಂದಾಗಿ ಸ್ಫೋಟ ಸಂಭವಿಸಿದೆ ಎಂದು ಸೇನೆ ತಿಳಿಸಿದೆ.
ಇನ್ನು 15 ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಖಾಸಗಿ ಟಾಟಾ ವಾಹನ ಶೋಪಿಯಾನ್ ತಲುಪಿದಾಗ ಸ್ಫೋಟ ಸಂಭವಿಸಿದ್ದು, ಮೂವರು ಸೇನಾ ಸಿಬ್ಬಂದಿಗೆ ಗಾಯವಾಗಿದೆ.