ತುಮಕೂರು, ಜೂ 01 (DaijiworldNews/SM): ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮನೆ ಮೇಲೆ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ದಾಳಿ ನಡೆಸಿದೆ. ಪಠ್ಯ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎಂದು ಅಂದಾಜಿಸಲಾಗಿದೆ.
ಇನ್ನು ಈ ದಾಳಿಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಇದನ್ನು ಖಂಡಿಸಿದ್ದಾರೆ. ಇಂದು ತುಮಕೂರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವರು, ಬಿ.ಸಿ. ನಾಗೇಶ್ ಮನೆ ಮೇಲೆ ಎನ್ಎಸ್ಯುಐಯವರು ದಾಂಧಲೆ ಮಾಡಿದ್ದಾರೆ. ಮನೆ ಬಳಿ ಬೆಂಕಿ ಹಚ್ಚುವ ಕೆಲಸ ಕೂಡ ಮಾಡಿದ್ದಾರೆ. ಇದು ಎನ್ಎಸ್ಯುಐ ಗೂಂಡಾ ವರ್ತನೆ. ಅದಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಕಿಡಿಕಾರಿದರು.