ನವದೆಹಲಿ, ಜೂ 01 (DaijiworldNews/DB): ದೇಶದ ಬೆಳವಣಿಗೆ ದರ ದುರ್ಬಲವಾಗುತ್ತಾ ಹೋಗುತ್ತಿದೆಯೇ ಹೊರತು ಚೇತರಿಕೆಯ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಪಿ. ಚಿದಂಬರಂ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 2021-22ರಲ್ಲಿ 20.1, 8.4, 5.4 ಮತ್ತು 4.1ರಷ್ಟು ತ್ರೈಮಾಸಿಕ ಬೆಳವಣಿಗೆ ಆಗಿದೆ. ಈ ಗ್ರಾಪ್ ನೋಡಿದಾಗ ದೇಶದ ಬೆಳವಣಿಗೆ ಯಾವ ರೀತಿ ಕುಸಿಯುತ್ತಿದೆ ಎಂಬುದು ಗೊತ್ತಾಗುತ್ತದೆ. ಪ್ರತಿ ತ್ರೈಮಾಸಿಕದಲ್ಲಿಯೂ ಬೆಳವಣಿಗೆ ದರ ದುರ್ಬಲಗೊಳ್ಳುತ್ತಾ ಹೋಗುತ್ತಿದೆಯೇ ಹೊರತು ಚೇತರಿಕೆಯಾಗುತ್ತಿಲ್ಲಎಂದು ತಿಳಿಸಿದ್ದಾರೆ.
2019-20ಕ್ಕಿಂತ 2021-22ರಲ್ಲಿನ ಜಿಡಿಪಿ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದೆ. ಆದರೆ 31-3-2020ರಲ್ಲಿ ಇದ್ದ ಆರ್ಥಿಕತೆಯೇ ಅದರ ನಂತರದ ಎರಡು ವರ್ಷಗಳಲ್ಲಿಯೂ ಇದೆ. ಅದರಲ್ಲೂ ಈ ವರ್ಷದ ಕೊನೆಯ ತ್ರೈಮಾಸಿಕ ದರ ಶೇ. 4.1 ದೇಶದ ಆರ್ಥಿಕತೆಯ ಬೆಳವಣಿಗೆ ಎಷ್ಟು ಕುಸಿದಿದೆ ಎಂಬುದನ್ನು ತೋರಿಸುತ್ತದೆ ಎಂದವರು ವಿಷಾದಿಸಿದ್ದಾರೆ.