ಅಯೋಧ್ಯೆ, ಜೂ 01 (DaijiworldNews/MS): ರಾಮ ಮಂದಿರ ನಿರ್ಮಾಣವಾಗುವ ಅಯೋಧ್ಯೆಯಲ್ಲಿ ಮದ್ಯಪಾನ ನಿಷೇಧಿಸಲು ಉತ್ತರ ಪ್ರದೇಶ ಸಿಎಂ ಯೋಗಿ ಅದಿತ್ಯಾನಾಥ್ ಸರ್ಕಾರ ಆದೇಶ ನೀಡಿದೆ.
ಉತ್ತರ ಪ್ರದೇಶದ ಅಬಕಾರಿ ಖಾತೆ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ನಿತಿನ್ ಅಗರವಾಲ್ ಅವರು ಅಯೋಧ್ಯೆಯ 'ಶ್ರೀರಾಮ ಮಂದಿರ' ಪ್ರದೇಶದಲ್ಲಿನ ಎಲ್ಲಾ ಮದ್ಯದಂಗಡಿಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ಮಂಗಳವಾರ ತಿಳಿಸಿದ್ದಾರೆ.
ಅಬಕಾರಿ ಅಂಗಡಿಗಳ ನಿಯಮಗಳು, 1968 ಗೆ ಮಾಡಲಾದ ತಿದ್ದುಪಡಿಗಳ ಸ್ಥಿತಿಯ ಕುರಿತು ಮಾಹಿತಿ ಕೋರಿದ ಬಹುಜನ ಸಮಾಜ ಪಕ್ಷದ ಸದಸ್ಯ ಭೀಮರಾವ್ ಅಂಬೇಡ್ಕರ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ ಅಗರವಾಲ್ ಮಾಹಿತಿ ನೀಡಿದರು.
ಈ ನಡುವೆ , ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರದಂದು ರಾಮಮಂದಿರದ ಗರ್ಭಗುಡಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.