ಲಕ್ನೋ, ಜೂ 01 (DaijiworldNews/MS): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆಗೆ ಭೇಟಿ ನೀಡಿದ್ದಾರೆ ನಿರ್ಮಾಣ ಹಂತದಲ್ಲಿರುವ ರಾಮ ಮಂದಿರದಲ್ಲಿ 'ಗರ್ಭಗುಡಿ' ನಿರ್ಮಾಣಕ್ಕೆ ಅಡಿಗಲ್ಲು ಹಾಕುವ ಕಾರ್ಯಕ್ರಮದಲ್ಲಿ ಬುಧವಾರ ಭಾಗಿಯಾಗಿದ್ದಾರೆ.
ಸಿಎಂ ಯೋಗಿ ಕೆತ್ತನೆ ಮಾಡಿರುವ ಕಲ್ಲಿಗೆ ಸಿಎಂ ಯೋಗಿ ಪೂಜೆ ನೆರವೇರಿಸುವ ಮೂಲಕ ದೇವಾಲಯದ ಗರ್ಭಗುಡಿ ನಿರ್ಮಾಣಕ್ಕೆ ಅಧಿಕೃತ ಚಾಲನೆ ನೀಡಿದರು.
ಗರ್ಭಗೃಹ ನಿರ್ಮಾಣಕ್ಕೆ ರಾಜಸ್ಥಾನದ ಮಕ್ರಾನಾ ಪರ್ವತದ ಅಮೃತಶಿಲೆಯನ್ನು ಬಳಸುವುದಾಗಿ ರಾಮ ಜನ್ಮಭೂಮಿ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಎಂಟರಿಂದ ಒಂಭತ್ತು ಘನ ಅಡಿಗಳಷ್ಟು ಕೆತ್ತನೆ ಮಾಡಲಾದ ಮರಳುಗಲ್ಲು, 6.37 ಲಕ್ಷ ಘನ ಅಡಿಗಳಷ್ಟು ಗ್ರಾನೈಟ್, 4.70 ಲಕ್ಷ ಘನ ಅಡಿಗಳಷ್ಟು ಗುಲಾಬಿ ಬಣ್ಣದ ಮರಳುಗಲ್ಲುಗಳನ್ನು ದೇವಾಲಯದ ನಿರ್ಮಾಣದಲ್ಲಿ ಹಾಗೂ ಗರ್ಭಗುಡಿಗಾಗಿ 13,300 ಘನ ಅಡಿಗಳಷ್ಟು ಬಿಳಿಯ ಮಕ್ರಾನಾ ಅಮೃತಶಿಲೆಯನ್ನು ಬಳಸುವುದಾಗಿ ಹೇಳಿದೆ.
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ೨೦೨೪ ರ ಲೋಕಸಭೆ ಚುನಾವಣೆಗೂ ಮುನ್ನ ಈ ಬೃಹತ್ ದೇವಸ್ಥಾನ ಲೋಕಾರ್ಪಣೆಗೊಳ್ಳಲಿದೆ.