ಹೈದರಾಬಾದ್, ಮೇ 31 (DaijiworldNews/DB): ಗೋವಾದಿಂದ ಹೈದರಾಬಾದ್ಗೆ ಮಾದಕ ವಸ್ತುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸಾಫ್ಟ್ವೇರ್ ಉದ್ಯೋಗಿಗಳಿಬ್ಬರನ್ನು ಚೌಟುಪ್ಪಲ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನುಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ವಟ್ಟೂರಿ ಸೂರ್ಯ ಸಂಪತ್ (23) ಮತ್ತು ರಾಜಮಂಡ್ರಿಯ ದೀಪಕ್ ಫಣೀಂದ್ರ ಎಂದು ಗುರುತಿಸಲಾಗಿದೆ. ಸಾಫ್ಟ್ವೇರ್ ಉದ್ಯೋಗದಲ್ಲಿರುವ ಇಬ್ಬರೂ ಹೈದರಾಬಾದ್ ಹಾಗೂ ಇತರೆಡೆಗಳಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡಲು ಗೋವಾದಿಂದ ಅಕ್ರಮವಾಗಿ ಸಾಗಿಸುತ್ತಿದ್ದರು.
ಸೋಮವಾರಪೇಟೆ ಚೌಟುಪ್ಪಲ್ನಲ್ಲಿ ಟ್ರಕ್ನಲ್ಲಿ ಅಂಬರ್ಪೇಟ ಮೂಲಕ ರಾಜಾಜಿನಗರಕ್ಕೆ ಮಾದಕ ದ್ರವ್ಯ ಸಾಗಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ನಿಷೇಧಿತ ಎಂಡಿಎಂಎ 25 ಮಾತ್ರೆಗಳು ಮತ್ತು ಎಲ್ಎಸ್ಡಿ-2 ಮಾದಕ ದ್ರವ್ಯಗಳನ್ನು ಗೋವಾದ ವ್ಯಕ್ತಿಯೊಬ್ಬನಿಂದ ಖರೀದಿಸಿದ್ದರು ಎಂದು ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ.
ಒಟ್ಟು 2.35 ಲಕ್ಷ ರೂ.ನಗದು. ಮೊಬೈಲ್ ಫೋನ್ಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಸಿಐ ಎನ್. ಶ್ರೀನಿವಾಸ್ ತಿಳಿಸಿರುವುದಾಗಿ ವರದಿಯಾಗಿದೆ.