ಬೆಂಗಳೂರು, ಮೇ 31 (DaijiworldNews/HR): ಬೆಂಗಳೂರಿನಲ್ಲಿ ಇತ್ತೀಚೆಗಷ್ಟೆ ಯುವತಿಯೊಬ್ಬಳ ಮೇಲೆ ಆ್ಯಸಿಡ್ ಎರಚಿರುವ ಘಟನೆ ಹಸಿಯಾಗಿರುವಾಗಲೇ ಸ್ನೇಹಿತನಿಂದಲೇ ಸ್ನೇಹಿತನ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಬೆಂಗಳೂರಿನ ಕಬ್ಬನ್ ಪೇಟೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸ್ನೇಹಿತನೊಬ್ಬ, ತನ್ನ ಸ್ನೇಹಿತನ ಮೇಲೆಯೇ ಆ್ಯಸಿಡ್ ದಾಳಿ ನಡೆಸಿದ್ದು, ಸ್ನೇಹಿತನ ಆ್ಯಸಿಡ್ ದಾಳಿಯಿಂದ ಯುವಕ ಗಂಭೀರವಾಗಿ ಗಾಯಗೊಂಡಿರೋದಾಗಿ ತಿಳಿದು ಬಂದಿದೆ.
ಇನ್ನು ಆತನ್ನನು ತಕ್ಷಣ ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎನ್ನಲಾದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ಇತ್ತೀಚೆಗಷ್ಟೆ ಸುಂಕದಕಟ್ಟೆಯ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಕೆಲ ದಿನಗಳ ಹಿಂದೆ ನಾಗೇಶ್ ಎಂಬಾತ ಮದುವೆಯಾಗಲು ನಿರಾಕರಿಸಿದಂತ ಯುವತಿಯ ಮೇಲೆ ಅಯಸಿಡ್ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಶೇ.35ರಷ್ಟು ಸುಟ್ಟ ಗಾಯದೊಂದಿಗೆ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.