ರಾಮನಗರ, ಮೇ 31 (DaijiworldNews/HR): ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಸಿದ್ದರಾಮಯ್ಯ ಅವರು ಆರ್ಎಸ್ಎಸ್ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಆರ್ಎಸ್ಎಸ್ನಲ್ಲಿ ಒಂದು ಜಾತಿಯವರಷ್ಟೇ ಕೆಲಸ ಮಾಡುತ್ತಿಲ್ಲ. ಎಲ್ಲರೂ ಇದ್ದಾರೆ. ನಾವೂ ಸಹ ಆರ್ಎಸ್ಎಸ್ ಭಾಗದವರೇ. ಆದರೆ ಆರ್ಎಸ್ಎಸ್ ಬಗ್ಗೆ ತಿಳಿದುಕೊಳ್ಳದೆ ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದರು.
ಇನ್ನು ಸಿದ್ದರಾಮಯ್ಯರಿಗೆ ಆರ್ಎಸ್ಎಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕಡು ಬಡತನದಿಂದ ಬಂದವರು ಪ್ರಾಮಾಣಿಕತೆ, ದಕ್ಷತೆ ಬಿಟ್ಟು ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದ್ದಾರೆ. ಅವರ ವಾಚ್, ಶೂ ಯಾವುದಕ್ಕಾದರೂ ಲೆಕ್ಕ ಇದೆಯೇ? ಎಂದು ಪ್ರಶ್ನಿಸಿದ್ದಾರೆ.