ಮೈಸೂರು, ಮೇ 30 (DaijiworldNews/DB): ಬಿ.ವೈ. ವಿಜಯೇಂದ್ರರಿಗೆ ಎಂಎಲ್ಸಿ ಟಿಕೆಟ್ ನೀಡದಿರುವುದಕ್ಕೆ ನಾನು ಹೈಕಮಾಂಡ್ಗೆ ಸೆಲ್ಯೂಟ್ ಹೊಡೆಯುತ್ತೇನೆ ಎಂದು ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದಅವರು, ಯಡಿಯೂರಪ್ಪ ಅವರು ರಾಜೀನಾಮೆ ನೀಡುವುದಕ್ಕೆ, ಅವರನ್ನು ಜೈಲಿಗೆ ಹಾಕಿಸುವುದಕ್ಕೆ ಅವರ ಮಗ ವಿಜಯೇಂದ್ರರೇ ಕಾರಣ ಎಂದು ಆಪಾದಿಸಿದರು.
ವಿಜಯೇಂದ್ರ ಇಲ್ಲದಿದ್ದಲ್ಲಿ ಬಿಜೆಪಿ ಸರ್ಕಾರ ಮುಳುಗುವುದಿಲ್ಲ. ಬಿಜೆಪಿಯಲ್ಲಿ ಸತ್ಯವಂತರು ತುಂಬಾ ಇದ್ದಾರೆ. ಚುನಾವಣೆಗೆ ನಿಂತು ಗೆದ್ದು ಬರಲಿ.ಅದರಿಂದ ಪಕ್ಷಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದವರು ತಿಳಿಸಿದರು.
ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯನ್ನು ರದ್ದುಗೊಳಿಸಿ ಕಳೆದ ಬಾರಿಯ ಪುಸ್ತಕಗಳನ್ನೇ ಮುಂದುವರಿಸಬೇಕು ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.