ನವದೆಹಲಿ, ಮೇ 30 (DaijiworldNews/MS): ರಾಜ್ಯಸಭೆ ಚುನಾವಣೆಗೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಡಿದ್ದು , ಬಹಿರಂಗವಾಗಿಯೇ ಅಭ್ಯರ್ಥಿಗಳು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯಸಭೆಗೆ ಸ್ಥಾನ ಸಿಗದಿರುವ ಬಗ್ಗೆ ನಟಿ, ಕಾಂಗ್ರೆಸ್ ನಾಯಕಿ ನಗ್ಮಾ ಟ್ವೀಟ್ ಮಾಡಿ, "ಬಹುಶಃ ನನ್ನ ತಪಸ್ಸಿನಲ್ಲಿ ಏನೋ ಲೋಪ ಇರಬೇಕು. ಆಗಾಗಿ ಟಿಕೆಟ್ ನಿರಾಕರಿಸಲಾಗಿದೆ" ಎಂದು ವ್ಯಂಗ್ಯವಾಗಿ ಪಕ್ಷದ ನಡೆಯನ್ನು ಟೀಕಿಸಿದ್ದಾರೆ.
ನಮ್ಮ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಜೀ ಅವರು 2003/04 ರಲ್ಲಿ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದಾಗ ಅವರ ಆದೇಶದ ಮೇರೆಗೆ ನನಗೆ ರಾಜ್ಯಸಭೆಯಲ್ಲಿ ಅವಕಾಶ ಕಲ್ಪಿಸಲು ವೈಯಕ್ತಿಕವಾಗಿ ಭರವಸೆ ನೀಡಿದ್ದರು. ಆಗ ನಾವು ಅಧಿಕಾರದಲ್ಲಿ ಇರಲಿಲ್ಲ. ಅಂದಿನಿಂದ 18 ವರ್ಷಗಳ ಕಾಲ ನನಗೆ ಅವಕಾಶ ಸಿಗಲಿಲ್ಲ. ಇಮ್ರಾನ್ ಅವರು ಮಹಾರಾಷ್ಟ್ರದಿಂದ ಅಭ್ಯರ್ಥಿಯಾಗಿದ್ದಾರೆ. ನಾನು ಕಡಿಮೆ ಅರ್ಹಳೆ ಎಂದು ನಾನು ಕೇಳುತ್ತೇನೆ ನನ್ನ 18 ವರ್ಷಗಳ ತಪಸ್ಸು ಇಮ್ರಾನ್ ಭಾಯ್ ಮುಂದೆ ಕಡಿಮೆಯಾಯಿತು ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಪಕ್ಷದ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಉತ್ತರ ಪ್ರದೇಶದ ಕವಿ ಇಮ್ರಾನ್ ಪ್ರತಾಪಘರ್ಹಿ ಅವರನ್ನು ಮಹಾರಾಷ್ಟ್ರದಿಂದ ಕಣಕ್ಕಿಳಿಸಲಾಗಿದೆ.