ಬೆಂಗಳೂರು, ಮೇ 30 (DaijiworldNews/HR): ದಿನಂಪ್ರತಿ ಡಿಕೆ ಶಿವಕುಮಾರ್ ಮಾಧ್ಯಮಗಳಲ್ಲಿ ಕಾಣಿಸಿಕೊಳ್ತಾ ಇದಾರೆ. ಹಾಗಾಗಿ ಇತ್ತ ತಾನು ಕಾಣೆಯಾಗುತ್ತಿದ್ದೇನೆ ಎಂಬ ಅಭದ್ರತೆ ಸಿದ್ದರಾಮಯ್ಯ ಅವರಿಗೆ ಕಾಡ್ತಾ ಇದೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಮಗೆ ಆರ್ಎಸ್ಎಸ್ ತಾಯಿ ಸಮಾನ, ನಮಗೆಲ್ಲಾ ಒಂದೇ ಪಕ್ಷ. ಆದರೆ ಸಿದ್ದರಾಮಯ್ಯಗೆ ಎರಡು ಮೂರು ಪಕ್ಷ ಆಗಿದೆ. ಅವರಿಗೆ ಯಾವುದೇ ನೈತಿಕತೆ ಇಲ್ಲ. ಮಾಡಲು ಕೆಲಸ ಇಲ್ಲದವರು ಏನೋ ಮಾಡಿದ್ರಂತೆ ಅನ್ನೋ ಹಾಗಿದೆ ಅವರ ವರ್ತನೆ ಎಂದರು.
ಇನ್ನು ಡಿಕೆ ಶಿವಕುಮಾರ್ ಅವರು ಪ್ರತಿದಿನ ಮಾಧ್ಯಮಗಳಲ್ಲಿ ಕಾಣಿಸಿಕೊಳ್ತಾ ಇದಾರೆ. ಹಾಗಾಗಿ ಇತ್ತ ತಾನು ಕಾಣೆಯಾಗುತ್ತಿದ್ದೇನೆ ಎಂಬ ಅಭದ್ರತೆ ಸಿದ್ದರಾಮಯ್ಯ ಅವರಿಗೆ ಕಾಡ್ತಾ ಇದೆ ಎಂದಿದ್ದಾರೆ.