ಹೈದರಾಬಾದ್, ಮೇ 30 (DaijiworldNews/HR): 545 ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ನಾಪತ್ತೆಯಾಗಿದ್ದ ಪ್ರಮುಖ ಆರೋಪಿ ಶಾಂತಾಬಾಯಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣ ಬೆಳಕಿಗೆ ಬಂದ ಏಪ್ರಿಲ್ 9ರಿಂದ ಶಾಂತಾಬಾಯಿ ನಾಪತ್ತೆಯಾಗಿದ್ದು, ಒಂದುವರೆ ತಿಂಗಳ ಬಳಿಕ ಇದೀಗ ಹೈದರಾಬಾದ್ ನಲ್ಲಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಇನ್ನು ಶಾಂತಾಬಾಯಿ 40 ಲಕ್ಷ ರೂಪಾಯಿ ಹಣ ಕೊಟ್ಟು ಬ್ಲುಟೂಥ್ ಮೂಲಕ ಅಕ್ರಮ ನಡೆಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದು, ತಲೆಮರೆಸಿಕೊಂಡಿದ್ದ ಶಾಂತಾಬಾಯಿ ಹೈದರಾಬಾದ್ ನಲ್ಲಿ ಇರುವ ಬಗ್ಗೆ ಸಿಐಡಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿತ್ತು. ಖಚಿತ ಮಾಹಿತಿ ಮೇರೆಗೆ ಕಳೆದ ಮೂರು ದಿನಗಳಿಂದ ಹೈದರಾಬಾದ್ ನಲ್ಲಿ ಪೊಲೀಸರು ಶಾಂತಾಬಾಯಿಗಾಗಿ ಹುಡುಕಾಟ ನಡೆಸಿದ್ದು, ಇದೀಗ ಕೊನೆಗೂ ಬಂಧಿಸಲಾಗಿದೆ.