ಬೆಂಗಳೂರು, ಮೇ 30 (DaijiworldNews/MS): ಕೋಡಿಹಳ್ಳಿ ಚಂದ್ರಶೇಖರ್ ಕಿಕ್ ಬ್ಯಾಂಕ್ ಆರೋಪ ಪ್ರಕರಣದಲ್ಲಿ ತಮ್ಮ ಹೆಸರು ಎಳೆದು ತಂದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸ್ಪಷ್ಟಿಕರಣ ನೀಡುತ್ತಿದ್ದ ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ಮತ್ತು ಯದುವೀರ್ ಸಿಂಗ್ ಅವರ ಮೇಲೆ ಕಿಡಿಗೇಡಿಗಳು ಮಸಿ ಬಳಿದಿದ್ದಾರೆ.
ಸೋಮವಾರ ಗಾಂಧಿಭವನದಲ್ಲಿ ಪತ್ರಿಕಾಗೋಷ್ಠಿ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಪತ್ರಕರ್ತರ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಗಣ್ಯರಿದ್ದ ವೇದಿಕೆಯ ಮೇಟ್ಟಿಲೇರಿ ಟಿವಿ ಮೈಕ್ ನಿಂದ ಯದುವೀರ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಜತೆಗೆ ಹಿಂಬಾಲಿಸಿದ ಗುಂಪು ರೈತ ನಾಯಕರಿಗೆ ಮಸಿ ಎರಚಿತು.
ಇದೇ ಸಂದರ್ಭ ಮೋದಿ ಮೋದಿ ಎಂಬ ಘೋಷಣೆಯನ್ನು ಕೂಗಿದರು. ತಕ್ಷಣ ಸ್ಥಳದಲ್ಲಿದ್ದ ರೈತರ ಗುಂಪು ಕಿಡಿಗೇಡಿಗಳನ್ನು ಹಿಡಿದು ಥಳಿಸಿ ಪೋಲಿಸರಿಗೆ ಒಪ್ಪಿಸಿದರು.