ಇಂಫಾಲ, ಮೇ 30 (DaijiworldNews/HR): ಅಪರಿಚಿತ ದುಷ್ಕರ್ಮಿಗಳು ಶಂಕಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಿಸಿದ ಪರಿಣಾಮ ಪಶ್ಚಿಮ ಬಂಗಾಳದ ಕಾರ್ಮಿಕರೊಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ಮಣಿಪುರದ ತೌಬಲ್ ಜಿಲ್ಲೆಯ ಸಮುದಾಯ ಭವನದಲ್ಲಿ ನಡೆದಿದೆ.
ಮೃತರನ್ನು ಖರಿಯಾತಾಬಾದ್ನ ಪಂಕಜ್ ಮಹತೋ (21) ಎಂದು ಗುರುತಿಸಲಾಗಿದೆ.
ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಅರೂಪ್ ಮಂಡಲ್ (30), ಸೌವಿಕ್ ಪಾತ್ರ (18), ಅಪೂರ್ವ ಮೊಂಡಲ್ (25) ಮತ್ತು ರಾಜೇಶ್ ರಮಣಿಕ್ (19) ಎಂದು ಗುರುತಿಸಲಾಗಿದೆ.
ಸೋಮವಾರ ಮುಂಜಾನೆ ಖೊಂಗ್ಜೋಮ್ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದ್ದು, ಈ ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.