ಬೆಂಗಳೂರು, ಮೇ 30 (DaijiworldNews/HR): ಮುಖ್ಯಮಂತ್ರಿ ಹಾಗೂ ಸ್ನೇಹಿತರು, ಶಾಸಕರು ಸಂಘದ ಹಿರಿಯರು ಎಲ್ಲರೂ ನಿರ್ಧಾರ ಮಾಡಿ ನನಗೆ ರಾಜ್ಯ ಸಭೆ ಟಿಕೆಟ್ ಕೊಟ್ಟಿದ್ದಾರೆ. ನಾನು ನಿರೀಕ್ಷೆ ಮಾಡಿರಲಿಲ್ಲ ಎಂದು ನಟ ಜಗ್ಗೇಶ್ ಹೇಳಿದ್ದಾರೆ.
ಈ ಕುರಿತು ಬಿಜೆಪಿ ಕಚೇರಿಯಲ್ಲಿ ಮಾತಾನಾಡಿದ ಅವರು, ಚಿಂತನೆಗಳು ಇತ್ತು ಮುಂದಿನ ದಿನಗಳಲ್ಲಿ ಯಾವ ರೀತಿ ಕೆಲಸ ಮಾಡಬೇಕು ಅಂತ ನನಗೆ ಕಲ್ಪನೆ ಇರಲಿಲ್ಲ. ಪಕ್ಷ ಹಾಗೂ ಸಂಘಟನೆಗೆ ಧನ್ಯವಾದ ಎಂದರು.
ಇನ್ನು ನನಗೆ ಹಿರಿಯರು ಪೋನ್ ಮಾಡಿ ದಾಖಲೆ ರೆಡಿ ಮಾಡಿಕೊಳ್ಳಲು ಹೇಳಿದ್ದು, ಆಗಲು ನನಗೆ ನಂಬಿಕೆ ಇರಲಿಲ್ಲ ಹೀಗಾಗಿ ಇದು ಸಂಪೂರ್ಣ ರಾಯರ ಆಶೀರ್ವಾದದಿಂದ ಬಂದಿದೆ ಎಂದಿದ್ದಾರೆ.
ಮಂಗಳವಾರ ನಾಮಿನೇಷನ್ ಮಾಡುತ್ತೇನೆ. ಇವತ್ತು ಇದಕ್ಕೆ ಬೇಕಾದ ದಾಖಲೆ ಸಿದ್ದತೆ ಮಾಡಿಕೊಳ್ಳುತ್ತೇನೆ. ನನಗೆ ನನ್ನ ಹೆಂಡತಿ ಕೂಡ ಇದರಲ್ಲಿ ಬಹಳ ಸಹಾಯ ಮಾಡುತ್ತಿದ್ದಾಳೆ. ಅವಳಿಗೂ ಧನ್ಯವಾದ. ನನಗೆ ನಿರೀಕ್ಷೆ ಇಲ್ಲದಿರುವುದರಿಂದ ದಾಖಲೆ ಸಂಗ್ರಹಿಸಲು ವಿಳಂಬ ಆಗಿದೆ. ದಾಖಲೆ ಸಂಗ್ರಹದ ಒತ್ತಡದಲ್ಲಿ ಇದ್ದೇನೆ ಎಲ್ಲಾ ಮುಗಿಸಿಕೊಂಡು ನಾಳೆ ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ಹೇಳಿದ್ದಾರೆ.