ತಿರುವನಂತಪುರಂ, ಮೇ 30 (DaijiworldNews/HR): ನನಗೆ ಬಿಜೆಪಿ ಪಕ್ಷವು ಉಪ ರಾಷ್ಟ್ರಪತಿ ಹುದ್ದೆಯ ಅವಕಾಶ ನೀಡಿತ್ತು ಎಂದು ಕಾಂಗ್ರೆಸ್ ಹಿರಿಯ ನಾಯಕ ಮತ್ತು ರಾಜ್ಯಸಭೆಯ ಮಾಜಿ ಉಪ ಸಭಾಪತಿ ಪಿಜೆ ಕುರಿಯನ್ ಹೇಳಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಪ್ರಧಾನಿ ಮೋದಿಯವರ ಪ್ರಸ್ತಾವನೆಯು ಕಾರ್ಯರೂಪಕ್ಕೆ ಬರದಿರಲು ಕಾರಣಗಳನ್ನು ಬಹಿರಂಗಪಡಿಸಲು ಕುರಿಯನ್ ನಿರಾಕರಿಸಿದ್ದು, ಈ ವಿಷಯದ ಬಗ್ಗೆ ನನ್ನ ತಪ್ಪು ವ್ಯಾಖ್ಯಾನವು ಒಂದು ಕಾರಣವಾಗಿರಬಹುದು ಎಂದು ನಾನು ಭಾವಿಸುತ್ತೇನೆ. ನಾನು ಇತರ ವಿಷಯಗಳ ಬಗ್ಗೆ ಚರ್ಚಿಸಲು ಬಯಸುವುದಿಲ್ಲ. ಅಗತ್ಯವಿದ್ದರೆ, ಭವಿಷ್ಯದಲ್ಲಿ ಎಲ್ಲವನ್ನೂ ತಿಳಿಸುತ್ತೇನೆ ಎಂದಿದ್ದಾರೆ.
ಇನ್ನು ಕುರಿಯನ್ ಅವರನ್ನು ಒಮ್ಮತದ ಅಭ್ಯರ್ಥಿಯಾಗಿ ಪ್ರಸ್ತಾಪಿಸಲಾಗಿದೆ ಎಂಬ ವದಂತಿಗಳು ಆಗ ಹರಿದಾಡಿದ್ದು, ಒಮ್ಮತದ ಅಭ್ಯರ್ಥಿಯ ಬಗ್ಗೆ ಯಾವುದೇ ಚರ್ಚೆಯಾಗದಂತೆ ನೋಡಿಕೊಳ್ಳಲು ಕಾಂಗ್ರೆಸ್ ತ್ವರಿತವಾಗಿ ಗೋಪಾಲಕೃಷ್ಣ ಗಾಂಧಿ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಪ್ರಸ್ತಾಪಿಸಿತು. ನಂತರ ಬಿಜೆಪಿ ಎನ್ಡಿಎ ಅಭ್ಯರ್ಥಿಯಾಗಿ ಎಂ ವೆಂಕಯ್ಯ ನಾಯ್ಡು ಅವರನ್ನು ಪ್ರಸ್ತಾಪಿಸಿದ್ದು, ನಾಯ್ಡು ಅವರು 272 ಮತಗಳ ದಾಖಲೆಯ ಅಂತರದಿಂದ ಗಾಂಧಿಯನ್ನು ಸೋಲಿಸಿದ್ದರು.
ಉಪ ರಾಷ್ಟ್ರಪತಿ ಚುನಾವಣೆಗೆ ಕೆಲವು ತಿಂಗಳುಗಳ ಮೊದಲು ತಿರುವಲ್ಲಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೆಂಕಯ್ಯ ನಾಯ್ಡು ಅವರು ಮಾಡಿದ ಭಾಷಣವನ್ನು ಪಿ ಜೆ ಕುರಿಯನ್ ನೆನಪಿಸಿಕೊಳ್ಳುತ್ತಾರೆ, ಇದರಲ್ಲಿ ಅವರು ದೇಶಕ್ಕೆ ಉನ್ನತ ಪಾತ್ರಕ್ಕಾಗಿ ಕುರಿಯನ್ ಅಗತ್ಯವಿದೆ ಎಂದು ಹೇಳಿದ್ದರು.