ಕೋಲಾರ, ಮೇ 30 (DaijiworldNews/MS): ಪತಿ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ಗೆ ಪತ್ನಿ ಅಕಸ್ಮಾತ್ ಆಗಿ ಸಿಲುಕಿ ಮೃತಪಟ್ಟ ಘಟನೆ ಕೋಲಾರ ಜಿಲ್ಲೆಯ ಕಲ್ವಮಂಜಲಿ ಗ್ರಾಮದ ಜಮೀನಿನಲ್ಲಿ ಭಾನುವಾರ ನಡೆದಿದೆ.
ಟ್ರ್ಯಾಕ್ಟರ್ಗೆ ರೋಟರ್ ಹಾಕಿ ಉಳುಮೆ ಮಾಡುತ್ತಿದ್ದ ಪತಿ ರಾಜೇಶ್ಗೆ ಮೊಬೈಲ್ ಕೊಡಲು ಸೌಮ್ಯ (35) ಹೋದಾಗ ಈ ದುರ್ಘಟನೆ ನಡೆದಿದೆ. ಕೃಷಿ ಯಂತ್ರಧಾರೆಯಡಿ ಟ್ರಾಕ್ಟರ್ ಬಾಡಿಗೆಗೆ ತಂದಿದ್ದು, ತಮ್ಮ ಜಮೀನಿನಲ್ಲಿ ಉಳುಮೆಗೆ ತೊಡಗಿದ್ದರು
ರೋಟರ್ಗೆ ಸೀರೆಯ ಸೆರಗು ಸಿಲುಕಿದ್ದು, ಕೂಡಲೇ ಯಂತ್ರದ ಕಡೆಗೆ ಎಳೆದುಕೊಂಡಿದೆ. ಟ್ರ್ಯಾಕ್ಟರ್ ಚಲಿಸುತ್ತಿದ್ದ ಕಾರಣ ಸೌಮ್ಯ ಅವರ ದೇಹ ರೋಟರ್ನಲ್ಲಿ ಸಿಲುಕಿ ತುಂಡು, ತುಂಡಾಗಿದೆ. ಪತಿ ಟ್ರ್ಯಾಕ್ಟರ್ ನಿಲ್ಲಿಸಿ ಕೆಳಗಿಳಿದು ಬರುವಷ್ಟರಲ್ಲಿ ಸೌಮ್ಯ ಅವರ ರುಂಡ, ಮುಂಡ, ಕೈ ಕಾಲು ಪ್ರತ್ಯೇಕಗೊಂಡು ಸ್ಥಳದಲ್ಲೇ ಬಿದ್ದಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ವೇಮಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತಿ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ಗೆ ಪತ್ನಿ ಅಕಸ್ಮಾತ್ ಆಗಿ ಸಿಲುಕಿ ಮೃತಪಟ್ಟಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಈ ಅವಘಡ ಸಂಭವಿಸಿದೆ.