ಮಡಿಕೇರಿ, ಮೇ 29 (DaijiworldNews/HR): ಈಜಲು ಹೋದ ಮೂವರು ಪ್ರವಾಸಿಗರು ಮುಕ್ಕೋಡ್ಲು ಗ್ರಾಮದ ಕೋಟೆ ಅಬ್ಬಿಯಲ್ಲಿ ನೀರು ಪಾಲಾಗಿರುವ ಘಟನೆ ಭಾನುವಾರ ನಡೆದಿದೆ.
ಮೃತರನ್ನು ತೆಲಂಗಾಣ ಮೂಲದವರೆಂದು ಗುರುತಿಸಲಾಗಿದೆ.
ಪ್ರವಾಸಕ್ಕೆಂದು ತೆಲಂಗಾಣದಿಂದ ಕೊಡಗಿಗೆ ಆಗಮಿಸಿದ್ದ ಪ್ರವಾಸಿಗರ ತಂಡ ಕುಶಾಲನಗರದ ಹೋಂ ಸ್ಟೇಯಲ್ಲಿ ತಂಗಿದ್ದು, ಅಲ್ಲಿಂದ ಕೋಟೆ ಅಬ್ಬಿಗೆ ಹೋಗಿದ್ದ ವೇಳೆ ಸ್ನಾನಕ್ಕೆಂದು ನೀರಿಗೆ ಇಳಿದಿದ್ದು, ಈ ವೇಳೆ ಮೂವರು ನೀರುಪಾಲಾಗಿದ್ದಾರೆ.
ಇನ್ನು ವಿಷಯ ತಿಳಿದು ಸ್ಥಳಕ್ಕಾಗಮಿಸಿದ ರಕ್ಷಣಾ ತಂಡ ಮೂವರ ದೇಹವನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ.