ಬೆಂಗಳೂರು, ಮೇ 29 (DaijiworldNews/DB): ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿ ರಾಜ್ಯದಿಂದ ಗಡೀಪಾರು ಮಾಡಬೇಕು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಒತ್ತಾಯಿಸಿದ್ದಾರೆ.
ಈ ಕುರಿತಂತೆ ಟ್ವಿಟ್ ಮಾಡಿರುವಂತ ಅವರು, ರಾಷ್ಟ್ರಕವಿಯವರನ್ನು ಅಪಮಾನಿಸಿದ ಚಕ್ರತೀರ್ಥ ಎಂಬ ಕಿಡಿಗೇಡಿಯನ್ನು ಸ್ಥಾನದಿಂದ ವಜಾಮಾಡುವುದು ಮಾತ್ರವಲ್ಲ, ರಾಜ್ಯದಿಂದ ಗಡಿಪಾರು ಮಾಡಬೇಕು. ಕನ್ನಡ ನಾಡು, ನುಡಿ ಮತ್ತು ಸಾಹಿತಿಗಳನ್ನು ಅವಮಾನಿಸುವವರಿಗೆ ಇದು ಪಾಠವಾಗಬೇಕು ಎಂದಿದ್ದಾರೆ.
ಒಕ್ಕಲಿಗರ ಸಂಘ ಮತ್ತು ಸಮುದಾಯದ ಸ್ವಾಮೀಜಿಗಳ ಆಗ್ರಹಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ.