ಬೆಂಗಳೂರು, ಮೇ 29 (DaijiworldNews/HR): ಪಿಎಸ್ಐ 'ಲಂಚದ ಹಗರಣ' ಈಗ 50 ಕೋಟಿ ತಲುಪಿದೆ! ಸಂಪೂರ್ಣ ತನಿಖೆ ನಡೆದರೆ 100 ಕೋಟಿ ದಾಟಲಿದೆ! 'ಭ್ರಷ್ಟಾಚಾರದ ಮಂಡಿ'ಯಲ್ಲಿ ರಾಜ್ಯದ ಯುವಕರ ಭವಿಷ್ಯ ಮಾರಾಟವಾಗುತ್ತಿದೆ. ಸಿಎಂಮತ್ತು ಗೃಹ ಸಚಿವರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಭವಿಷ್ಯದ ಉಳಿವಿಗಾಗಿ 40% ಕಮಿಷನ್ ಬೊಮ್ಮಾಯಿ ಸರ್ಕಾರ ತೊಲಗಬೇಕು ಎಂದು ಕರ್ನಾಟಕ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ದೇಶದ ರಾಷ್ಟ್ರಧ್ವಜಕ್ಕೆ ಬೆಲೆಕೊಡದೆ ಅವಮಾನಿಸುವ, ಈ ದೇಶ ಕಂಡ ಮಹಾ ದಾರ್ಶನಿಕ ಗಾಂಧಿ ಹತ್ಯೆಯನ್ನು ಸಂಭ್ರಮಿಸುವ ಆರ್ಎಸ್ಎಸ್ ಈ ದೇಶದ ಸಪುಂಸಕ ಸಂಘಟನೆಯೇ ಹೊರತಾಗಿ ಯಾವುದೇ ಕಾರಣಕ್ಕೂ ದೇಶಪ್ರೇಮಿ ಸಂಘಟನೆಯಾಗಲಾರದು ಎಂದು ಕಿಡಿ ಕಾರಿದೆ.
ಬಿಜೆಪಿಯವರು ಎಲ್ಲಾ ಲೂಟಿ ಮಾಡಿ ತಿಂದು ತೇಗಿದ್ದಾರೆ ನನಗೆ ಏನೂ ಉಳಿಸಿಲ್ಲ ನಾನು ಮಂತ್ರಿಯಾಗಿ ಏನ್ ಮಾಡ್ಲಿ : ಯತ್ನಾಳ್ ಬಿಜೆಪಿಯವರ ಪ್ರಕಾರ ಮಂತ್ರಿಯಾಗುವುದು, ಸರ್ಕಾರ ನಡೆಸುವುದೆಂದರೆ ಜನರ ದುಡ್ಡನ್ನು ಲೂಟಿ ಹೊಡೆಯುವುದು ಎಂದರ್ಥ ಅಷ್ಟೇ ಈ ಮಾತನ್ನು ನಾವು ಹೇಳಿದ್ದಲ್ಲ ಬದಲಿಗೆ ಬಿಜೆಪಿಯ ನಾಯಕರಾದ ಯತ್ನಾಳ್ ಹೇಳಿದ ಮಾತುಗಳಿವು ಎಂದಿದೆ.
ಆರ್ಎಸ್ಎಸ್ ಈ ದೇಶಕ್ಕೆ ದ್ರೋಹ ಬಗೆದ ಸಂಘಟನೆ ಎಂಬುದಕ್ಕೆ ಒಂದಷ್ಟು ನಿದರ್ಶನಗಳು : 1929 ರ ಲಾಹೋರ್ ಅಧಿವೇಶನದಲ್ಲಿ ಅಂದಿನ ಅಧ್ಯಕ್ಷರಾದ ಜವಾಹರಲಾಲ್ ನೆಹರೂರವರು ದೇಶದ ಎಲ್ಲಾ ಸಂಸ್ಥೆಗಳ ಮೇಲೆ 1930 ಜನವರಿ 26ರಂದು ತ್ರಿವರ್ಣ ಧ್ವಜ ಹಾರಿಸಬೇಕೆಂದು ಕರೆಕೊಡುತ್ತಾರೆ ಇದನ್ನು ನಿರಾಕರಿಸಿದ ಆರ್ಎಸ್ಎಸ್ ತನ್ನ ಸಂಘದ ಕಛೇರಿಯ ಮೇಲೆ ಭಗವಾಧ್ವಜ ಹಾರಿಸುತ್ತದೆ ಎಂದಿದೆ.
ಇನ್ನು ಅಷ್ಟೇ ಅಲ್ಲದೆ ತ್ರಿವರ್ಣ ಧ್ವಜವನ್ನು ಅವಮಾನಿಸುತ್ತಾ 3 ಬಣ್ಣಗಳುಳ್ಳ ಧ್ವಜ ಅನಿಷ್ಟದ ಸಂಕೇತ ಎಂದು ಆರ್ಎಸ್ಎಸ್ ತನ್ನ ಮುಖವಾಣಿ 'ಆರ್ಗನೈಸರ್' ಅಲ್ಲಿ ಬರೆಯುತ್ತದೆ. 55 ವರ್ಷಗಳ ಕಾಲ ರಾಷ್ಟ್ರಧ್ವಜಕ್ಕೆ ಗೌರವ ನೀಡದೆ ತನ್ನ ಸಂಘದ ಕಛೇರಿಯ ಮೇಲೆ ತ್ರಿವರ್ಣ ಧ್ವಜದ ಬದಲಾಗಿ ಭಗವಾಧ್ವಜ ಹಾರಿಸುತ್ತದೆ ಎಂದು ಹೇಳಿದೆ.