ಜಮ್ಮು, ಮೇ 29 (DaijiworldNews/HR): ಭಾರತೀಯ ಸೇನೆಯು ಬಾಂಬ್ ಹಾಗೂ ಗ್ರನೈಡ್ ಹೊತ್ತೊಯ್ಯುತ್ತಿದ್ದ ಪಾಕಿಸ್ತಾನದ ಡ್ರೋಣ್ನ್ನು ಇಂದು ಹೊಡೆದುರುಳಿಸಿರುವ ಘಟನೆ ಜಮ್ಮುಕಾಶ್ಮೀರದ ಕಥುವಾ ಜಿಲ್ಲೆಯ ಹೀರಾ ನಗರದಲ್ಲಿ ನಡೆದಿದೆ.
ಅಂತಾರಾಷ್ಟ್ರೀಯ ಗಡಿ ಸಮೀಪ ಯೋಧರು ಶೋಧ ನಡೆಸುತ್ತಿದ್ದಾಗ ಇಂದು ಮುಂಜಾನೆ ಪಾಕಿಸ್ತಾನದ ಕಡೆಯಿಂದ ಡ್ರೋಣ್ ಬರುತ್ತಿದ್ದನ್ನು ಗಮನಿಸಿದ್ದು, ಡ್ರೋಣ್ ದೇಶದ ಗಡಿ ದಾಟಲು ಮುಂದಾಗುತ್ತಿದ್ದಂತೆ ಗುಂಡಿಟ್ಟು ಹೊಡೆದುರುಳಿಸಿದ್ದಾರೆ.
ಇನ್ನು ಭೂಮಿಗೆ ಬಿದ್ದ ಡ್ರೋಣ್ನಲ್ಲಿ ಏಳು ಮಾಗ್ನಿಟಿಕ್ ಬಾಂಬ್ ಹಾಗೂ 7 ಯುಬಿಜಿಎಲ್ ಗ್ರನೈಡ್ಗಳಿದ್ದವು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ತಿಳಿಸಿದ್ದಾರೆ.