ನವದೆಹಲಿ, ಮೇ 29 (DaijiworldNews/DB): ಅಖಿಲ ಭಾರತ ವಿದ್ಯಾರ್ಥಿ ಸಂಘದ ಸದಸ್ಯನೊಬ್ಬ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಮಹಿಳೆಯೊಬ್ಬರು ದೂರು ನೀಡಿದ್ದಾರೆ.
ನನ್ನ ಅನುಮತಿ ಇಲ್ಲದೆ ಸಂಘದ ಸದಸ್ಯ ನನ್ನಅಂಗಾಂಗಳನ್ನು ಸ್ಪರ್ಶಿಸಿದ್ದಾನೆ. ಅಲ್ಲದೆ ಹಿಂದಿನಿಂದ ಬಲವಂತವಾಗಿ ತಬ್ಬಿಕೊಂಡು ಅಸಹ್ಯ ವರ್ತನೆ ತೋರಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಲೈಂಗಿಕ ಕಿರುಕುಳದ ದೂರನ್ನು ಲಿಂಗ ಸಂವೇದನೆ ಸಮಿತಿಗೆ ಹಸ್ತಾಂತರಿಸಲಾಗಿದೆ. ಅಲ್ಲದೆ, ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸಂಘದ ಚಟುವಟಿಕೆಗಳಿಂದ ದೂರ ಉಳಿಯುವಂತೆ ಸದಸ್ಯನಿಗೆ ಸೂಚಿಸಲಾಗಿದೆ ಎನ್ನಲಾಗಿದೆ. ಮಹಿಳೆಯ ದೂರು ಕುರಿತಂತೆ ಮಾಹಿತಿ ನೀಡಲು ಜೆಎನ್ಯುನ ಐಸಿಸಿ ಅಧ್ಯಕ್ಷೆ ಪೂನಂ ಕುಮಾರಿ ನಿರಾಕರಿಸಿದ್ದಾರೆ. ಹಲವಾರು ದೂರುಗಳನ್ನು ನಾವು ಸ್ವೀಕರಿಸುತ್ತೇವೆ. ಆದರೆ ನಿಯಮ ಮೀರಿ ಅದನ್ನು ಬಹಿರಂಗಪಡಿಸುವುದಕ್ಕೆ ಆಗುವುದಿಲ್ಲ. ಆದರೆ ದೂರು ಬಂದ ತತ್ಕ್ಷಣ ಅದನ್ನು ಸ್ವೀಕರಿಸುತ್ತೇವೆ. ಸಂಸ್ಥೆಯಲ್ಲಿ ಲಭ್ಯವಿರುವ ಪರಿಹಾರ ಪ್ರಕ್ರಿಯೆಯನ್ನೂ ಆರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.