ಮೈಸೂರು, ಮೇ 29 (DaijiworldNews/HR): ಸಿದ್ದರಾಮಯ್ಯ ಅವರಿಗೆ ಆರ್ಎಸ್ಎಸ್ ಬಗೆಗಿನ ಪುಸ್ತಕವನ್ನು ಕಳುಹಿಸುತ್ತೇನೆ. ಅದನ್ನು ಓದಿ ಆರ್ಎಸ್ಎಸ್ ಏನೆಂಬುದನ್ನು ತಿಳಿದುಕೊಳ್ಳಲಿ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಆರ್ಎಸ್ಎಸ್ ಕಚೇರಿಗೆ ಬರುವುದಾದರೆ ನಾನೇ ಕರೆದೊಯ್ದು ತೋರಿಸುತ್ತೇನೆ. ಅವರಿಗೆ ಆರ್ಎಸ್ಎಸ್ ಬಗ್ಗೆ 1 ಪರ್ಸೆಂಟ್ ಕೂಡ ಗೊತ್ತಿಲ್ಲ. ಅವರ ಹೇಳಿಕೆ ಯಾರೂ ಗಂಭೀರವಾಗಿ ಪರಿಗಣಿಸಬೇಡಿ ಎಂದರು.
ಇನ್ನು ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಹೇಳಿಕೆಗೆ ಯಾವುದೇ ಕಿಮ್ಮತ್ತಿಲ್ಲ. ಮೊದಲು ಸಿದ್ದರಾಮಯ್ಯ ಮಾತು, ಭಾಷಣ ಎಲ್ಲರೂ ಕೇಳುತ್ತಿದ್ದರು. ಇತ್ತೀಚೆಗೆ ಅವರ ಮಾತಿನಲ್ಲಿ ತೂಕವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.