ಬೆಂಗಳೂರು, ಮೇ 29 (DaijiworldNews/DB): ಕುಲವನಹಳ್ಳಿ ಸೂಲಕುಂಟೆ ರಸ್ತೆಯ ಪಟಾಲಮ್ಮ ದೇವಾಲಯದ ಸಮೀಪ ಟ್ರ್ಯಾಕ್ಟರ್ ಗೆ ಬೈಕ್ ಢಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ಅರೆಬೊಮ್ಮನಹಳ್ಳಿಯ ಸೂರ್ಯ(19) ಮತ್ತು ಮಹೇಶ್(20) ಎಂದು ಗುರುತಿಸಲಾಗಿದೆ. ಸೂಲಕುಂಟೆ ಗ್ರಾಮದ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಸೂಲಕುಂಟೆ ರಸ್ತೆಯಲ್ಲಿ ರಾತ್ರಿ ವೇಳೆ ಅಪಘಾತ ಸಂಭವಿಸಿದೆ. ಹೆಡ್ಲೈಟ್ ಇಲ್ಲದೆಯೇ ಟ್ರಾಕ್ಟರ್ ಚಾಲಕ ಟ್ರಾಕ್ಟರ್ ಚಲಾಯಿಸಿಕೊಂಡು ಬರುತ್ತಿದ್ದ. ಚಾಲಕನ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ನ್ನಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.