ಬೀದರ್, ಮೇ 28 (DaijiworldNews/HR): ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ನನ್ನ ಮುಂದೆ ಗೋ ಮಾಂಸ ತಿನ್ನಲಿ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಸವಾಲೊಡ್ಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿದ್ದರಾಮಯ್ಯಗೆ ಆಹ್ವಾನ ಮಾಡುತ್ತೇನೆ. ನನ್ನ ಮುಂದೆ ಕುಳಿತು ಮಾಂಸ ತಿಂದು ತೋರಿಸಲಿ ಎಂದಿದ್ದಾರೆ.
ಇನ್ನು ನಾನು ಇದುವರೆಗೂ ಗೋ ಮಾಂಸ ತಿಂದಿಲ್ಲ. ತಿನ್ನಬೇಕು ಅನ್ನಿಸಿದರೆ ತಿನ್ನುತ್ತೇನೆ. ಸಗಣಿ, ಗಂಜಲ ಎತ್ತದ, ಹಸು ಸಾಕದ, ಉಳಿಮೆ ಮಾಡದವರು ಗೋ ಹತ್ಯೆ ಬಗ್ಗೆ ಹೇಳುತ್ತಾರೆ, ಅವರಿಂದ ನಾನು ಪಾಠ ಕಲಿಬೇಕಾ ಎಂದು ಇತ್ತೀಚೆಗೆ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದರು.