ಜೈಪುರ, ಮೇ 28 (DaijiworldNews/DB): ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿ ಐವರ ಶವ ಬಾವಿಯಲ್ಲಿ ಪತ್ತೆಯಾದ ಘಟನೆರಾಜಸ್ಥಾನದ ಜೈಪುರ ಜಿಲ್ಲೆಯ ದುಡು ಪಟ್ಟಣದಲ್ಲಿ ನಡೆದಿದೆ. ಸ್ಥಳೀಯರು ಇದೊಂದು ಹತ್ಯೆ ಎಂದು ಶಂಕಿಸಿದ್ದಾರೆ.
ಸಹೋದರಿಯರಾದ ಕಲುದೇವಿ, ಮಮತಾ, ಕಮಲೇಶ, ನಾಲ್ಕು ವರ್ಷದ ಮಗು ಮತ್ತು 27 ದಿನ ಪ್ರಾಯದ ಮಗು ಹತ್ಯೆಯಾದವರು. ಹತ್ಯೆಯಾದ ಮಹಿಳೆಯರ ಪೈಕಿ ಮಮತಾದೇವಿ, ಕಮಲೇಶ ತುಂಬು ಗರ್ಭಿಣಿಯರು. ಮಕ್ಕಳಿಬ್ಬರೂ ಕಲುದೇವಿ ಅವರದ್ದು ಎನ್ನಲಾಗಿದೆ.
ಹತ್ಯೆಯಾದ ಮಹಿಳೆಯರ ಪೈಕಿ ಮಮತಾ ದೇವಿ ಮತ್ತು ಕಮಲೇಶ ಇಬ್ಬರೂ ತುಂಬು ಗರ್ಭಿಣಿಯಾಗಿದ್ದಾರೆ. ಮನೆಯಿಂದ ಸುಮಾರು ಎರಡು ಕಿಮೀ ದೂರದಲ್ಲಿರುವ ಬಾವಿಯಲ್ಲಿ ಶವಗಳು ಪತ್ತೆಯಾಗಿದ್ದು, ವರದಕ್ಷಿಣೆ ಕಾರಣಕ್ಕಾಗಿ ಅತ್ತೆಯಂದಿರು ಅವರನ್ನು ಕೊಂದಿದ್ದಾರೆ ಎಂಬ ಶಂಕೆ ಇದೀಗ ವ್ಯಕ್ತವಾಗಿದೆ. ಐವರೂ ಕೂಡಾ ಬುಧವಾರ ನಾಪತ್ತೆಯಾಗಿದ್ದು, ನಾಲ್ಕು ದಿನಗಳ ಕಾಲ ಹುಡುಕಾಟ ನಡೆಸಲಾಗಿತ್ತು. ಆದರೆ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಹುಡುಕಾಟ ನಿಲ್ಲಿಸಿದ್ದರು. ಶನಿವಾರದಂದು ಮೃತದೇಹ ಪತ್ತೆಯಾಗಿದೆ. ಮೃತ ಕಲುದೇವಿ ಅತ್ತಿಗೆಯಿಂದ ಥಳಿತಕ್ಕೆ ಒಳಗಾಗಿ ಸುಮಾದು ಹದಿನೈದು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.