ಬೆಂಗಳೂರು, ಮೇ 28 (DaijiworldNews/DB): ಮದ್ಯ ಕುಡಿಯಲು ಹಣ ಹೊಂದಿಸುವ ಸಲುವಾಗಿ ಸೈಕಲ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಈವರೆಗೆ 54 ದುಬಾರಿ ಬೆಲೆಯ ಸೈಕಲ್ಗಳನ್ನು ಕದ್ದು ಮಾರಾಟ ಮಾಡಿದ್ದ ಎನ್ನಲಾಗಿದೆ.
ಬಂಧಿತ ಆರೋಪಿಯನ್ನು ಬಾಲರಾಜ್ ಎಂದು ಗುರುತಿಸಲಾಗಿದೆ.
ಬೆಂಗಳೂರಿನಲ್ಲಿ ನಿರಂತರ ಟ್ರಾಫಿಕ್ ಜಾಂ ಆಗುತ್ತಿರುವುದರಿಂದ ಹಲವರು ದುಬಾರಿ ಬೆಲೆಯ ಸೈಕಲ್ಗಳ ಮೊರೆ ಹೋಗಿದ್ದಾರೆ. ಇದನ್ನು ತಿಳಿದುಕೊಂಡ ಆರೋಪಿ ಗೇರ್ ಹೊಂದಿರುವ ಸೈಕಲ್ಗಳನ್ನು ಕದ್ದು2-3 ಸಾವಿರ ರೂ.ಗಳಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.