ಮೈಸೂರು, ಮೇ 28 (DaijiworldNews/HR): ಮಳಲಿ ದೇವಸ್ಥಾನ ಮಾತ್ರವಲ್ಲ, ದೇಶದ ಎಲ್ಲಾ ದೇವಸ್ಥಾನ ವಾಪಸ್ ಪಡೆಯುತ್ತೇವೆ. ಅಯೋಧ್ಯೆಗೂ ಕೂಡ ಇದೇ ಹೇಳಿದ್ದರು, ರಕ್ತಪಾತ ಆಗುತ್ತದೆ ಎಂದು ಆದರೆ ಈಗ ಏನಾಯಿತು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳಲಿ ದೇವಸ್ಥಾನದ ಸಂಬಂಧ ತಾಂಬೂಲ ಪ್ರಶ್ನೆ ಹಾಕಲಾಗಿದ್ದು, ಅದು ಹಿಂದೂ ದೇವಸ್ಥಾನ, ವೀರಶೈವ ಮಠ. ಬರಿ ಮಳಲಿ ದೇವಸ್ಥಾನ ಅಲ್ಲ ದೇಶದ ಎಲ್ಲಾ ದೇವಸ್ಥಾನ ವಾಪಸ್ ಪಡೆಯುತ್ತೇವೆ ಎಂದರು.
ಇನ್ನು ಉದ್ಧಟತನ, ಸೊಕ್ಕಿನ ಮಾತು ಇನ್ನು ಮೇಲೆ ನಡೆಯುವುದಿಲ್ಲ. ಸಂವಿಧಾನದ ಆಧಾರದ ಮೇಲೆ ಪಡೆಯುತ್ತೇವೆ. ಇಲ್ಲಿನ ಮುಸ್ಲಿಂರಲ್ಲಿ ಹಿಂದೂ ರಕ್ತ ಇದೆ. ನೀವು ಎಲ್ಲೂ ಹೋಗಬೇಡಿ, ಹಿಂದೂಗಳ ಭಾವನೆ ಸಂಸ್ಕೃತಿಗೆ ಗೌರವ ಕೊಟ್ಟು ಬದುಕಿ ಎಂದು ಹೇಳಿದ್ದಾರೆ.