ರಾಜ್ ಕೋಟ್ (ಗುಜರಾತ್), ಮೇ 28 (DaijiworldNews/DB): ಜೀವನದಲ್ಲಿ ಸಾಧನೆಯ ಮೈಲುಗಲ್ಲು ಏರಲು ಕಾರಣವಾದ ನನ್ನ ಹುಟ್ಟೂರು ಗುಜರಾತ್ ಮತ್ತು ಇಲ್ಲಿನ ಜನರಿಗೆ ನಾನು ಎಂದಿಗೂ ಆಭಾರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್ ರಾಜ್ಯದ ರಾಜ್ ಕೋಟ್ನ ಅಟ್ಕೊಟ್ನಲ್ಲಿ ಕೆಡಿಪಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ನಾನು ಏನೇ ಮಾಡಿದ್ದರೂ ಅದಕ್ಕೆ ಕಾರಣ ನನ್ನ ಹುಟ್ಟೂರು, ರಾಜ್ಯ ಗುಜರಾತ್ ಎಂದರು.
ಜನರ ಪ್ರಯತ್ನ ಮತ್ತು ಸರ್ಕಾರದ ಪ್ರಯತ್ನಗಳು ಸಂಪರ್ಕಿಸಿದಾಗ ಜನಸೇವೆಯ ಶಕ್ತಿ ಹೆಚ್ಚುತ್ತದೆ. ಅದಕ್ಕೆ ಉದಾಹರಣೆಯೇ ಇಂದು ಉದ್ಘಾಟನೆಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ. ಸರ್ಕಾರದ ಜನಧನ್ ಯೋಜನೆಯಿಂದ ಹಲವು ಮಂದಿ ಬಡ ವರ್ಗದವರಿಗೆ ಪ್ರಯೋಜನವಾಗಿದೆ. ರೈತರು, ಕಾರ್ಮಿಕರಿಗೆ ಹಣ ಜಮೆ ಮಾಡಲಾಗಿದೆ. ಉಚಿತ ಗ್ಯಾಸ್ ಸಿಲಿಂಡರ್ಗಳ ಪ್ರಯೋಜನವನ್ನು ಬಡವರು ಪಡೆದಿದ್ದಾರೆ ಎಂದರು.
ಬಡ,ಮಧ್ಯಮವರ್ಗದಜನಜೀವನವನ್ನುಸುಲಭಗೊಳಿಸುವುದ್ದೇಶನಮ್ಮದು.ರಷ್ಯಾ ಉಕ್ರೇನ್ ಸಮರ, ಕೊರೊನಾದಂತಹ ಕಷ್ಟ ಕಾಲದಲ್ಲಿಯೂ ದೇಶವಾಸಿಗಳಿಗೆ ಯಾವುದೇ ತೊಂದರೆಗಳಾಗದಂತೆ ನೋಡಿಕೊಳ್ಳಲಾಗಿದೆ ಎಂದು ಹೇಳಿದರು.
ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ಸಂಬಂಧಿಸಿದ ಯೋಜನೆಗಳ ಕಡತಗಳನ್ನು ಯುಪಿಎ ಸರ್ಕಾರ ಅನುಮೋದನೆ ಮಾಡುತ್ತಿರಲಿಲ್ಲ ಎಂದು ಹಿಂದಿನ ಸರ್ಕಾರದ ವಿರುದ್ದ ಇದೇ ವೇಳೆ ಮೋದಿ ವಾಗ್ದಾಳಿ ನಡೆಸಿದರು.