ಶ್ರೀನಗರ, ಮೇ 27 (DaijiworldNews/HR): ಶ್ರೀನಗರ ಸಂಸದ ಫಾರೂಕ್ ಅಬ್ದುಲ್ಲಾ ಅವರಿಗೆ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಶನ್ನಲ್ಲಿ (ಜೆಕೆಸಿಎ) ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ.
ಫಾರೂಕ್ ಅಬ್ದುಲ್ಲಾ ಅವರು ಮೇ 31ರಂದು ಚಂಡೀಗಡದ ಕಚೇರಿಗೆ ಬಂದು ವಿಚಾರಣೆಯಲ್ಲಿ ಪಾಲ್ಗೊಳ್ಳಲು ಇಡಿ ಸೂಚಿಸಿರುವುದಾಗಿ ವರದಿಯಾಗಿದೆ.
ಇನ್ನು ಜೆಕೆಸಿಎನಲ್ಲಿ ಅಬ್ದುಲ್ಲಾ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ 43 ಕೋಟಿ ರೂಪಾಯಿ ದುರ್ಬಳಕೆ ಆಗಿದೆ ಎಂಬ ಆರೋಪ ಸಂಬಂಧ 2020ರ ಅಕ್ಟೋಬರ್ 21 ರಂದು ಸತತ 7 ತಾಸುಗಳ ಕಾಲ ವಿಚಾರಣೆ ನಡೆಸಲಾಗಿದ್ದು, ಆ ಬಳಿಕ 2019ರ ಜುಲೈನಲ್ಲಿ, 2018ರಲ್ಲಿ, 2020ರ ಡಿಸೆಂಬರ್ 19ರಂದು ಕೂಡ ವಿಚಾರಣೆ ನಡೆಸಲಾಗಿದೆ.