ಜಮ್ಮು-ಕಾಶ್ಮೀರ, ಮೇ 27 (DaijiworldNews/HR): ಲಡಾಕ್ನ ಟುರ್ ಟುಕ್ ಸೆಕ್ಟರ್ನಲ್ಲಿ ಸೇನಾ ವಾಹನ ಸ್ಕಿಡ್ ಆಗಿ ಶಯೋಕ್ ನದಿಗೆ ಬಿದ್ದ ಪರಿಣಾಮ ಏಳು ಮಂದಿ ಯೋಧರು ಹುತಾತ್ಮರಾಗಿದ್ದು, ಅನೇಕ ಸೈನಿಕರು ಗಾಯಗೊಂಡಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಪರ್ತಾಪುರ್ ಟ್ರಾನ್ಸಿಟ್ ಶಿಬಿರದಿಂದ 26 ಯೋಧರಿದ್ದ ಸೇನಾ ವಾಹನವು ಉಪ ಸೆಕ್ಟರ್ ಹನೀಫ್ ಪ್ರದೇಶಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ವಾಹನ ಸ್ಕಿಡ್ ಆಗಿ ಶಯೋಕ್ ನದಿಗೆ ಉರುಳಿ ಬಿದ್ದಿದ್ದು, ಏಳು ಮಂದಿ ಹುತಾತ್ಮರಾಗಿದ್ದಾರೆ.
ಇನ್ನು ಗಾಯಗೊಂಡ ಯೋಧರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಗಾಯಾಳು ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.