ಹುಬ್ಬಳ್ಳಿ, ಮೇ 27 (DaijiworldNews/HR): ನಾವು ಯಾವತ್ತು ನೆಹರು ಅವರನ್ನ ಮೋದಿಯವರ ಜೊತೆ ಹೋಲಿಸಿಯೇ ಇಲ್ಲ, ಮೋದಿಯವರಿಗೆ ಸರಿಸಾಟಿಯಾಗಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ನಾವು ಯಾವತ್ತು ನೆಹರು ಅವರನ್ನ ಮೋದಿಯವರ ಜೊತೆ ಹೋಲಿಸಿಯೇ ಇಲ್ಲ, ಮೋದಿ ಅವರಿಗೆ ಸರಿಸಾಟಿಯಾಗಲು ಸಾಧ್ಯವಿಲ್ಲ ಎಂದ ಅವರು, ಸಿದ್ದರಾಮಯ್ಯ ಅವರಿಗೆ ಆರ್ಎಸ್ಎಸ್ ಬಗ್ಗೆ ಗೊತ್ತಿಲ್ಲ ಅಂದರೆ ಅವರ ಮೇಲೆ ಅನುಕಂಪವಿದೆ. ಗೊತ್ತಿದ್ದರೂ, ನಾಟಕ ಮಾಡ್ತಿದ್ದಾರೆ ಎಂದರು.
ಇನ್ನು ಆರ್ಎಸ್ಎಸ್ ಸ್ಥಾಪಿಸಿದ ಹೆಗಡೆವಾರ್ ಅವರು ದೇಶದ ಅಪ್ರತಿಮ ನಾಯಕ. ಮುಸ್ಲಿಂ ತುಷ್ಟಿಕರಣಕ್ಕೋಸ್ಕರ ಬಾಯಿಗೆ ಬಂದ ಹಾಗೆ ಸಿದ್ದರಾಮಯ್ಯ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.