ಕಾರವಾರ, ಮೇ 27 (DaijiworldNews/DB): ಜಲಾಂತರ್ಗಾಮಿ ಐಎನ್ಎಸ್ ಖಂಡೇರಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಸಮುದ್ರಯಾನ ನಡೆಸಿದರು.
ಕಾರ್ಯಕ್ರಮದ ನಿಮಿತ್ತ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗಾದಲ್ಲಿರುವ ಕದಂಬ ನೌಕಾನೆಲೆಗೆ ಗುರುವಾರ ಆಗಮಿಸಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಿಬಂದಿ ಮತ್ತು ಅವರ ಕುಟುಂಬದವರೊಂದಿಗೆ ಸಂವಾದ ನಡೆಸಿದ್ದರು. ಬಳಿಕ ಶುಕ್ರವಾರ ನೌಕೆಯಲ್ಲಿ ಸಮುದ್ರಯಾನ ನಡೆಸಿದರು.
ಈ ಜಲಾಂತರ್ಗಾಮಿ ನೌಕೆಯನ್ನು 2019ರಲ್ಲಿ ರಾಜನಾಥ ಸಿಂಗ್ ಲೋಕಾರ್ಪಣೆ ಮಾಡಿದ್ದರು. ಮೇಕ್ ಇನ್ ಇಂಡಿಯಾ ಯೋಜನೆಯಡಿ ಸಂಪೂರ್ಣ ಭಾರತೀಯ ತಂತ್ರಜ್ಞಾನವನ್ನೇ ಬಳಸಿಕೊಂಡು ಈ ನೌಕೆಯನ್ನು ತಯಾರಿಸಲಾಗಿತ್ತು. ಮುಂಬೈನ ಅಜಗಾಂವ್ ಡಾಕ್ ಯಾರ್ಡ್ ನಲ್ಲಿಇದು ನಿರ್ಮಾಣವಾಗಿತ್ತು.