ಚಿಕ್ಕೋಡಿ, ಮೇ 27 (DaijiworldNews/HR): ಬೆಳಗಾವಿಯ ನಿಪ್ಪಾಣಿಯ ಸ್ಥವನಿಧಿ ಘಾಟ್ ಬಳಿ ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ಅದಗೊಂಡ ಪಾಟೀಲ್ ಮತ್ತು ಛಾಯಾ ಪಾಟೀಲ್ ದಂಪತಿ, ಇವರ ಮಗ ಮಹೇಶ್ ಪಾಟೀಲ್, ಅದಗೊಂಡ ಪಾಟೀಲ್ರ ತಾಯಿ ಚಾಪ್ಪಾತಾಯಿ ಎಂದು ಗುರುತಿಸಲಾಗಿದೆ.
ಇನ್ನು ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಮೃತದೇಹಗಳನ್ನು ಹೊರ ತೆಗೆಯಲು ಪೊಲೀಸರು ಹರಸಾಹಸಪಟ್ಟರು.
5 ದಿನದ ಹಿಂದೆ ಧಾರವಾಡದಲ್ಲಿ ಮದುವೆ ದಿಬ್ಬಣದ ವಾಹನ ಅಪಘಾತಕ್ಕೀಡಾಗಿ ಒಂದೇ ದಿನ 8 ಮಂದಿ ಮೃತಪಟ್ಟಿದ್ದರು.