ಕಲಬುರಗಿ, ಮೇ 27 (DaijiworldNews/HR): ಶಹಾಬಾದ ತಾಲ್ಲೂಕಿನ ಮರತೂರ ಗ್ರಾಮದಲ್ಲಿ ಪೊಲೀಸರ ಕಿರುಕುಳ ಸಹಿಸಲಾರದೇ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದ್ದು, ಆತ ಬರೆದಿರುವ ಡೆತ್ನೋಟ್ ಪತ್ತೆಯಾಗಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಮನೋಜ ಸಿಂಧೆ (32) ಎಂದು ಗುರುತಿಸಲಾಗಿದೆ.
ಮೃತ ಮನೋಜ್ ಅವರ ಹೆಂಡತಿಯ ಅಣ್ಣನ ಮಗು ಕಾಣೆಯಾಗಿದ್ದು, ನೀನೇ ತೆಗೆದುಕೊಂಡು ಹೋಗಿದ್ದಿಯಾ ಅಂತಾ ಮನೋಜ್ನನ್ನು ಪೊಲೀಸರು ಟಾರ್ಚರ್ ಮಾಡಿದ್ದು, ಎರಡು ದಿನ ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ನಾನು ತೆಗೆದುಕೊಂಡು ಹೋಗಿಲ್ಲ ಎಂದು ಹೇಳಿದರೂ ಪೊಲೀಸರು ಕೇಳಲಿಲ್ಲ. ಇವತ್ತು ಬಿಟ್ಟಿದ್ದೇವೆ, ನಾಳೆ ನಿನ್ನ ಹೆಂಡತಿಯನ್ನೂ ಕೂಡ ಕರೆದುಕೊಂಡು ಬಂದು ಇಬ್ಬರಿಗೂ ಟಾರ್ಚರ್ ಮಾಡುತ್ತವೇ ಎಂದು ಬೆದರಿಕೆ ಹಾಕಿರುವುದಾಗಿ ಡೆತ್ನೋಟ್ ಬರೆದಿಟ್ಟಿದ್ದಾನೆ.