ಬೆಳಗಾವಿ, ಮೇ 27 (DaijiworldNews/DB): ಮದುವೆ ಮೆರವಣಿಗೆಯಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ಎಂಇಎಸ್ ಪುಂಡರು ದಾಂಧಲೆ ನಡೆಸಿ ಮೆರವಣಿಗೆ ಮೇಲೆ ದಾಳಿ ಮಾಡಿದ ಘಟನೆ ಬೆಳಗಾವಿಯ ಧಾಮನೆಯಲ್ಲಿ ನಡೆದಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.
ಕನ್ನಡದ ವಿಚಾರವಾಗಿ ವೃಥಾ ಖ್ಯಾತೆ ತೆಗೆಯುತ್ತಿರುವ ಎಂಇಎಸ್ ಪುಂಡರು ಕಳೆದ ರಾತ್ರಿ ಮತ್ತೆ ತಮ್ಮ ಪುಂಡಾಟ ಮೆರೆದಿದ್ದಾರೆ. ಧಾಮನೆ ಗ್ರಾಮದಲ್ಲಿ ಬ್ಯಾಂಡ್ ಮೂಲಕ ವಧೂ-ವರರ ಅದ್ದೂರಿ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ಕನ್ನಡ ಧ್ವಜ ಹಿಡಿದು ಕರುನಾಡೇ ಹಾಡಿಗೆ ಮೆರವಣಿಗೆಯಲ್ಲಿದ್ದವರು ಡ್ಯಾನ್ಸ್ ಮಾಡುತ್ತಿದ್ದರು.
ಕನ್ನಡ ಹಾಡು ಹಾಕಿದ್ದಕ್ಕೆ ಕೋಪಗೊಂಡ ಎಂಇಎಸ್ ಕಾರ್ಯಕರ್ತರು ವಧೂ-ವರರು ಸೇರಿದಂತೆ ಮೆರವಣಿಗೆಯಲ್ಲಿ ಭಾಗಿಯಾದವರ ಮೇಲೆ ದಾಳಿ ಮಾಡಿ ಹಲ್ಲೆ ನಡೆಸಿದದಾರೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ. ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.