ನವದೆಹಲಿ, ಮೇ 27 (DaijiworldNews/HR): ದೆಹಲಿಯ ಕ್ರೀಡಾಂಗಣದಲ್ಲಿ ಕ್ರೀಡಾಳುಗಳನ್ನು ತೆರವುಗೊಳಿಸಿ ತನ್ನ ನಾಯಿಯನ್ನು ವಾಕಿಂಗ್ ಮಾಡಿಸಿದ ಭಾರತೀಯ ಆಡಳಿತ ಸೇವೆಗಳ ಅಧಿಕಾರಿ ಸಂಜೀವ್ ಖಿರ್ವಾರ್ ಅವರನ್ನು ಲಡಾಖ್ಗೆ ಹಾಗೂ ಅವರ ಪತ್ನಿ ರಿಂಕು ದುಗ್ಗಾ ಅವರನ್ನು ಅರುಣಾಚಲ ಪ್ರದೇಶಕ್ಕೆ ವರ್ಗಾವಣೆ ಮಾಡಲಾಗಿದೆ.
ಸಂಜೀವ್ ಖಿರ್ವಾರ್ ಮತ್ತು ಅವರ ಪತ್ನಿ ರಿಂಕು ದುಗ್ಗಾ ಅವರು ತ್ಯಾಗರಾಜ್ ಕ್ರೀಡಾಂಗಣದಲ್ಲಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡಿರುವುದಕ್ಕೆ ಇಬ್ಬರನ್ನು ವರ್ಗಾವಣೆ ಮಾಡಲಾಗಿದ್ದು, ವರದಿಯ ಆಧಾರದ ಮೇಲೆ ಅಗತ್ಯ ಕ್ರಮವನ್ನು ಪ್ರಾರಂಭಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಇನ್ನು ಕ್ರೀಡಾಂಗಣದಲ್ಲಿ ತರಬೇತಿ ಪಡೆಯುವ ಕ್ರೀಡಾಪಟುಗಳು ಮತ್ತು ತರಬೇತುದಾರರು ಎಂದಿಗಿಂತಲೂ ಮುಂಚಿತವಾಗಿ, ಸಂಜೆ 7 ಗಂಟೆಗೆ ತರಬೇತಿಯನ್ನು ಪೂರ್ಣಗೊಳಿಸಲು ಸೂಚಿಸಲಾಗಿದ್ದು, ಬಳಿಕ ಸಂಜೀವ್ ಖಿರ್ವಾರ್ ಮತ್ತು ಅವರ ಪತ್ನಿ ರಿಂಕು ದುಗ್ಗಾ ತಮ್ಮ ಪತ್ನಿಯೊಂದಿಗೆ ಸ್ಟೇಡಿಯಂನಲ್ಲಿ ವಾಕಿಂಗ್ ನಡೆಸಿದ್ದರು.ಆದರೆ, ಕ್ರೀಡಾಂಗಣದ ಆಡಳಿತಾಧಿಕಾರಿ ಅಜಿತ್ ಚೌಧರಿ ಅವರು ಅಥ್ಲೀಟ್ಗಳ ಆರೋಪವನ್ನು ಅಲ್ಲಗಳೆದಿದ್ದು, ಅಥ್ಲೀಟ್ಗಳಿಗೆ ತರಬೇತಿ ನೀಡಲು ಅಧಿಕೃತ ಸಮಯ ಸಂಜೆ 7 ಗಂಟೆಯವರೆಗೆ ಇದ್ದು, ನಂತರ ತರಬೇತುದಾರರು ಮತ್ತು ಕ್ರೀಡಾಪಟುಗಳು ತೆರಳುತ್ತಾರೆ ಎಂದು ಹೇಳಿದ್ದಾರೆ.