ನಾಗ್ಪುರ, ಮೇ 27(DaijiworldNews/MS): ಥಲಸ್ಸೆಮಿಯಾದಿಂದ ಬಳಲುತ್ತಿದ್ದ ನಾಲ್ವರು ಮಕ್ಕಳಿಗೆ ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ (ಎಚ್ಐವಿ ) ತುತ್ತಾಗಿರುವ ಸೋಂಕಿತರ ರಕ್ತ ನೀಡಿದ್ದು, ಸೋಂಕಿಗೆ ತುತ್ತಾಗಿ ಮಗುವೊಂದು ಮೃತಪಟ್ಟ ಆಘಾತಕಾರಿ ಘಟನೆ ನಾಗ್ಪುರದಲ್ಲಿ ನಡೆದಿದೆ.
ಈ ನಾಲ್ವರು ಮಕ್ಕಳಿಗೆ ತಲಸ್ಸೆಮಿಯಾ ಚಿಕಿತ್ಸೆಗಾಗಿ ರಕ್ತವನ್ನು ನೀಡಲಾಗಿತ್ತು. ಆದರೆ ಬಳಿಕ ಅವರಿಗೆ ಸೋಂಕು ತಗುಲಿರುವುದು ಕಂಡುಬಂದಿದೆ. ಈ ವಿಷಯವನ್ನು ಪರಿಗಣನೆಗೆ ತೆಗೆದುಕೊಂಡು ರಾಜ್ಯ ಆರೋಗ್ಯ ಇಲಾಖೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.
ಪ್ರಕರಣ ಸಂಬಂಧ ಎಲ್ಲಾ ಮಾಹಿತಿ ಸಂಗ್ರಹಿಸಿ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಸಹಾಯಕ ಉಪನಿರ್ದೇಶಕ ಡಾ.ಆರ್.ಕೆ. ಧಾಕಾಟೆ ತಿಳಿಸಿದ್ದಾರೆ. ಆಹಾರ ಮತ್ತು ಔಷಧ ಇಲಾಖೆ (ಎಫ್ಡಿಎ) ಕೂಡ ಪ್ರಕರಣದ ಪ್ರಾಥಮಿಕ ತನಿಖೆ ಆರಂಭಿಸಿದೆ ಎಂದು ಅವರು ತಿಳಿಸಿದ್ದಾರೆ.
ಚಿಕಿತ್ಸೆ ವೇಳೆ ಮಕ್ಕಳನ್ನು ಪರೀಕ್ಷೆಗೊಳಪಡಿಸಿದಾಗ ಎಚ್ಐವಿ ಸೋಂಕಿರುವುದು ಕಂಡುಬಂದಿದೆ. ಕಲುಷಿತ ರಕ್ತವನ್ನು ಬ್ಲಡ್ ಬ್ಯಾಂಕ್ನಿಂದ ನೀಡಿದ ನಂತರ ಅವರಿಗೆ ಎಚ್ಐವಿ ಮತ್ತು ಹೆಪಟೈಟಿಸ್ ಬಿ ಸೋಂಕು ತಗುಲಿದೆ ಎಂದು ಹೇಳಲಾಗಿದೆ.
ಚಿಕಿತ್ಸೆಯ ಸಮಯದಲ್ಲಿ ಪರೀಕ್ಷಿಸಿದಾಗ ಎಚ್ಐವಿ ಸೋಂಕಿತರೆಂದು ಕಂಡುಬಂದಿದೆ. ಕಲುಷಿತ ರಕ್ತವನ್ನು ರಕ್ತನಿಧಿಯಿಂದ ಅವರಿಗೆ ನೀಡಿದ ನಂತರ ಅವರು ಎಚ್ಐವಿ ಮತ್ತು ಹೆಪಟೈಟಿಸ್ ಬಿ ಸೋಂಕಿಗೆ ಒಳಗಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಥಲಸ್ಸೇಮಿಯಾದಿಂದ ಬಳಲುತ್ತಿರುವ ಮಕ್ಕಳಿಗೆ ನ್ಯೂಕ್ಲಿಯಿಕ್ ಆಸಿಡ್ ಟೆಸ್ಟ್ (NAT ) ರಕ್ತ ಪರೀಕ್ಷೆ ಮಾಡಿಸುವುದು ಅಗತ್ಯವಾಗಿದೆ, ಆದರೆ ರಕ್ತನಿಧಿಯಲ್ಲಿ ಈ ಸೌಲಭ್ಯ ಲಭ್ಯವಿಲ್ಲದ ಕಾರಣ ಮಕ್ಕಳು ಎಚ್ಐವಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಡಾ.ವಿಕ್ಕಿ ರುಗ್ವಾನಿ ಘಟನೆಯ ಕುರಿತು ವಿವರಿಸಿದ್ದಾರೆ