ಧಾರವಾಡ, ಮೇ 26 (DaijiworldNews/DB): ಏನಾದರೂ ಹೇಳಿಕೆ ಕೊಡಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ಸಿಗರು ಅನಗತ್ಯ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ನವರ ಟೀಕೆಗೆ ಜೂನ್ 15ರಂದು ಉತ್ತರ ಸಿಗುತ್ತದೆ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಬಸವರಾಜ ಹೊರಟ್ಟಿ ಅವರು ಅಧಿಕಾರ ದಾಹದಿಂದ ಮತ್ತೆ ಸಭಾಪತಿ ಆಗಬೇಕು ಎಂಬ ಆಸೆಯಿಂದ ಬಿಜೆಪಿ ಸೇರಿದ್ದಾರೆ ಎಂಬ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿಕೆಗೆ ಧಾರವಾಡದಲ್ಲಿ ಗುರುವಾರತಿರುಗೇಟು ನೀಡಿದ ಅವರು, ನನಗೆ ಸೋಲಿನ ಭಯ ಇಲ್ಲ. ಈ ಹಿಂದೆಯೂ ವಿವಿಧ ಪಕ್ಷಗಳಿಂದ ನನ್ನನ್ನು ಶಿಕ್ಷಕರು ಆಯ್ಕೆ ಮಾಡಿದ್ದಾರೆ. ಏನಾದರೂ ಹೇಳಿಕೆ ನೀಡಬೇಕೆಂಬ ಉದ್ದೇಶ ಕಾಂಗ್ರೆಸ್ಸಿಗರದ್ದು. ಅದಕ್ಕಾಗಿ ಇಂತಹ ಮಾತುಗಳನ್ನು ಆಡುತ್ತಾರೆ ಎಂದರು.
ಬಿಜೆಪಿಗೆ ಇನ್ನೂ ಹಲವರು ಸೇರ್ಪಡೆಯಾಗಲಿದ್ದಾರೆ ಎಂಬ ವಿಚಾರ ನನಗೆ ತಿಳಿದಿಲ್ಲ. ರಾಜ್ಯಾಧ್ಯಕ್ಷರು ಹೇಳಿಕೆ ನೀಡಿದ್ದರೆ ಅದು ಅಧಿಕೃತ ವ್ಯಕ್ತಿ ಹೇಳಿದಂತೆಯೇ ಎಂದು ಹೊರಟ್ಟಿ ತಿಳಿಸಿದರು.