ನವದೆಹಲಿ, ಮೇ 26 (DaijiworldNews/MS): ಭಾರತೀಯ ಸೇನೆಯ ಏವಿಯೇಷನ್ ವಿಭಾಗಕ್ಕೆ ಕ್ಯಾಪ್ಟನ್ ಅಭಿಲಾಷಾ ಬಾರಕ್ ಯುದ್ಧವಿಮಾನದ ಪೈಲಟ್ ಸೇರ್ಪಡೆಗೊಂಡಿದ್ದು, ಇದರೊಂದಿಗೆ ಯುದ್ಧವಿಮಾನದ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಸೇನಾ ಏವಿಯೇಷನ್ ಟ್ರೇನಿಂಗ್ ಸ್ಕೂಲ್'ನಲ್ಲಿ ಒಂದು ವರ್ಷದ ಕೋರ್ಸ್ ಪಡೆದ ನಂತರ ಬುಧವಾರ ಹೆಲಿಕಾಪ್ಟರ್ ಚಲಾಯಿಸಿದ್ದಾರೆ.ಈ ಮೂಲಕ ಮೂವತ್ತು ವರ್ಷಗಳ ನಂತರ ಭಾರತೀಯ ವಾಯುಪಡೆ ಸರಿದ ಮೊದಲ ಮಹಿಳೆಯಾಗಿದ್ದಾರೆ.ನಾಸಿಕದ ಯುದ್ಧ ವಿಮಾನ ತರಬೇತಿ ಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ಅವರು ಇತರ 36 ಸೇನಾ ಪೈಲಟ್ಗಳ ಜೊತೆ ಯುದ್ಧ ವಿಮಾನ ಪೈಲಟ್ ಆಗಿ ಪದವಿ ಪಡೆದರು.ಕ್ಯಾ. ಅಭಿಲಾಶಾ ಅವರು ಮೂಲತಃ ಹರಿಯಾಣಾದವರು. ನಿವೃತ್ತ ಕರ್ನಲ್ ಓಮ್ ಸಿಂಗ್ ಅವರ ಮಗಳು. 2018ರ ಸೆಪ್ಟೆಂಬರ್ನಲ್ಲಿ ಅವರು ಸೇನಾ ವಾಯು ರಕ್ಷಣಾ ಕಾರ್ಪ್ಸ್ಗೆ ಸೇರಿದರು. ಸೇನಾ ವಾಯು ರಕ್ಷಣಾ ಕಾರ್ಪ್ಸ್ಗೆ ಸೇರ್ಪಡೆಯಾಗುವ ಮೊದಲು ಅವರು ಸೇನೆಯ ಹಲವಾರು ತರಬೇತಿಗಳನ್ನು ಪಡೆದಿದ್ದಾರೆ.
೧೫ ಮಂದಿ ಮಹಿಳೆಯರು ಆರ್ಮಿ ಏವಿಯೇಷನ್ ಸೇರುವುದಕ್ಕೆಂದು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಕೇವಲ ಇಬ್ಬರು ವೈದ್ಯಕೀಯ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.
ಈ ಕಾರ್ಯಕ್ರಮದ ಪೋಟೋಗಳನ್ನು ಆರ್ಮಿ ಏವಿಯೇಶನ್ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ . ಯುವ ಪೈಲೆಟ್ ಗಳು ತಮ್ಮ ರೆಕ್ಕೆ ಬಿಚ್ಚಲು ಸಿದ್ದರಾಗಿದ್ದಾರೆ ಎಂದು ಬರೆದುಕೊಂಡಿದೆ.