ಬೆಂಗಳೂರು, ಮೇ 26 (DaijiworldNews/DB): ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದಿರಲಿ, ಅಲ್ಲಿಂದ ಹೊರ ಹೋಗುವವರನ್ನು ತಡೆಯುವುದಕ್ಕೇ ಆ ಪಕ್ಷದ ನಾಯಕರಿಗೆ ಸಾಧ್ಯವಾಗುವುದಿಲ್ಲ ಎಂದು ಬಿಜೆಪಿ ರಾಜ್ಯ ಘಟಕವು ಕಾಂಗ್ರೆಸ್ ನಾಯಕರ ಕಾಲೆಳೆದಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಕರ್ನಾಟಕ, ನಮ್ಮ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ, ಮತ್ತಷ್ಟು ಜನರು ಬಂದು ಸೇರಲಿದ್ದಾರೆ ಎಂದೆನ್ನುವ ನಾಯಕರೇ ಮೊದಲು ನಿಮ್ಮ ಬಾಗಿಲು ಮುಚ್ಚಿಕೊಳ್ಳಿ. ಬರುವವರು ಹಾಗಿರಲಿ, ಹೋಗುವವರನ್ನು ತಡೆಯುವುದಕ್ಕೇ ನಿಮ್ಮಿಂದ ಸಾಧ್ಯವಾಗುವುದಿಲ್ಲ. ಕೌಂಟ್ಡೌನ್ ಶುರುವಾಗಿದೆ ಎಂದಿದೆ.
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಿಯವರೆಗೂ ನಕಲಿ ಗಾಂಧಿ ಕುಟುಂಬದ ಪಾದ ಪೂಜೆ ನಡೆಯುತ್ತದೆಯೋ ಅಲ್ಲಿಯವರೆಗೆ ಇದೆಲ್ಲಾ ಸಾಮಾನ್ಯ. ಜಿ23 ಅತಿ ಶೀಘ್ರದಲ್ಲೇ ಜಿ0 ಆಗಲಿದೆ ಎಂದು ಬಿಜೆಪಿ ಟೀಕಿಸಿದೆ.
ಅಂದು ಕ್ವಿಟ್ಇಂಡಿಯಾ,ಇಂದು ಕ್ವಿಟ್ ಕಾಂಗ್ರೆಸ್. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಿಯವರೆಗೂ ನಕಲಿ ಗಾಂಧಿ ಕುಟುಂಬದ ಪಾದ ಪೂಜೆ ನಡೆಯುತ್ತದೆಯೋ ಅಲ್ಲಿಯವರೆಗೆ ಇದೆಲ್ಲಾ ಸಾಮಾನ್ಯ. ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ಭಾರತ್ ಜೋಡೋ ಅಭಿಯಾನದ ಸಂಕಲ್ಪ ಮಾಡಿದರು. ಇದು ಭಾರತ್ ಜೋಡೋ ಅಲ್ಲ, ಕಾಂಗ್ರೆಸ್ ಛೋಡೋ ಯಾತ್ರೆ ಎಂದು ನಾವು ವಿಶ್ಲೇಷಿಸಿದ್ದೆವು. ಫಲಿತಾಂಶ ಇಲ್ಲಿದೆ ಎಂದು ಬಿಜೆಪಿಯು ಲೇವಡಿ ಮಾಡಿದೆ.