ತೆಲಂಗಾಣ, ಮೇ 26 (DaijiworldNews/MS): ರಾಜ್ಯದ ಎಲ್ಲಾ ಮಸೀದಿಗಳನ್ನು ಉತ್ಖನನ ಮಾಡಿ, ಒಂದು ವೇಳೆ ಶಿವಲಿಂಗಗಳು ಕಂಡುಬಂದರೆ, ಮುಸ್ಲಿಮರು ಆ ಮಸೀದಿಗಳನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕಾಗುತ್ತದೆ ಮತ್ತು ಮೃತದೇಹಗಳು ಕಂಡುಬಂದರೆ, ಮುಸ್ಲಿಮರು ಆ ಮಸೀದಿಗಳನ್ನು ತಾವೇ ಇಟ್ಟುಕೊಳ್ಳಬಹುದು ಎಂದು ತೆಲಂಗಾಣದಲ ರಾಜ್ಯ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸವಾಲೊಡ್ಡಿದ್ದಾರೆ.
ಕರೀಂನಗರದಲ್ಲಿ ಹನುಮ ಜಯಂತಿ ನಿಮಿತ್ತ ನಡೆದ ಹಿಂದೂ ಏಕತಾ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಬಂಡಿ ಸಂಜಯ್, ''ಮಸೀದಿಯ ಜಾಗದಲ್ಲಿ ಎಲ್ಲೆಲ್ಲಿ ಅಗೆದರೂ ಶಿವಲಿಂಗಗಳು ಸಿಗುತ್ತವೆ. ರಾಜ್ಯದ ಎಲ್ಲಾ ಮಸೀದಿಗಳನ್ನು ಅಗೆಯಿರಿಓವೈಸಿಗೆ ಸವಾಲು ಹಾಕುತ್ತಿದ್ದೇನೆ. ಮೃತದೇಹಗಳು ಸಿಕ್ಕರೆ ನೀವು ಮಸೀದಿ ಎಂದು ಒಪ್ಪಿಕೊಳ್ಳುತ್ತೇವೆ. ಆದರೆ ಶಿವ (ಶಿವಲಿಂಗ) ಪತ್ತೆಯಾದರೆ ಅದನ್ನು ನಮಗೆ ಒಪ್ಪಿಸಿ. ಈ ಸವಾಲು ನೀವು ಅದನ್ನು ಸ್ವೀಕರಿಸುತ್ತೀರಾ? ಎಂದು ಓವೈಸಿ ತಿರುಗೇಟು ನೀಡಿದ್ದಾರೆ
ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರ ಮೀಸಲಾತಿಯನ್ನು ರದ್ದುಪಡಿಸಲಾಗುವುದು ಮತ್ತು ಉರ್ದು ಭಾಷೆಯನ್ನು ನಿಷೇಧಿಸಲಾಗುವುದು ಎಂದು ಅವರು ಹೇಳಿದ್ದಾರೆ