ಬೆಂಗಳೂರು, ಮೇ 25 (DaijiworldNews/HR): ಬೆಂಗಳೂರಿನ ಸುಂಕದಕಟ್ಟೆಯ ಶಾಂತಿಧಾಮ ಶಾಲೆಯ ಮೆಟ್ಟಿಲು, ಕಾಂಪೌಂಡ್ ಹಾಗೂ ರಸ್ತೆಯುದ್ದಕ್ಕೂ ಸ್ವಾರಿ ಎಂದು ಬರೆದಿದ್ದ ಹುಚ್ಚು ಪ್ರೇಮಿಯ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿರುವ ಘಟನೆ ನಡೆದಿದೆ.
ರಾತ್ರಿ ವೇಳೆಗೆ ಜೊಮ್ಯಾಟೊ ಬ್ಯಾಗ್ ನೊಂದಿಗೆ ಸುಂಕದಕಟ್ಟೆಯ ಶಾಂತಿಧಾಮ ಶಾಲೆಯ ಬಳಿ ಬಂದ ಇಬ್ಬರಿಂದ ಈ ಕೃತ್ಯ ಎಸಗಲಾಗಿರುವ ಶಂಕೆ ವ್ಯಕ್ತವಾಗುತ್ತಿದ್ದು, ಬ್ಯಾಗ್ ತುಂಬಾ ಸ್ಪ್ರೇ ತಂದು ರೋಡಲ್ಲಿ ಸ್ವಾರಿ ಬರೆದಿದ್ದಾರೆ ಎನ್ನಲಾಗಿದೆ.
ಇನ್ನು ಯಾರೋ ಹುಚ್ಚು ಪ್ರೇಮಿ ಬರೆದಿದ್ದಿರ ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಕೆಪಿಓಡಿ ಅಡಿ ಕೇಸ್ ಅಡಿ ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.