ಬೆಂಗಳೂರು, ಮೇ 25 (DaijiworldNews/HR): 'ಜೀ' ಹುಜೂರ್ ಎನ್ನುತ್ತಿರುವ ರಾಜ್ಯ ಬಿಜೆಪಿ, ಯಡಿಯೂರಪ್ಪನವರನ್ನು 'ದುರಂತ ನಾಯಕ'ನನ್ನಾಗಿಸಿದೆ ಎಂದು ಕರ್ನಾಟಕ ಕಾಂಗ್ರೆಸ್ ಘಟಕ ಟೀಕಿಸಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರು ಕಾಂಗ್ರೆಸ್, ಯಡಿಯೂರಪ್ಪನವರನ್ನು ಮೂಲೆಗೆ ಎತ್ತಿ ಬಿಸಾಡುವ ತಂತ್ರಗಾರಿಕೆಯ ಬಾಗವಾಗಿರುವ 'ಪರಿಷತ್ ಟಿಕೆಟ್' ಕದನ ಬಿಜೆಪಿಯನ್ನು ಸುಡುತ್ತಿದೆ ಬಿಜೆಪಿಯದ್ದು ಮಹಿಳಾ ಮನ್ನಣೆ ಅಲ್ಲ, ಬಿಎಸ್ ವೈ ಮುಕ್ತ ಬಿಜೆಪಿಯ ಚಿತಾವಣೆ ಅಷ್ಟೇ. 'ಜೀ' ಹುಜೂರ್ ಎನ್ನುತ್ತಿರುವ ರಾಜ್ಯ ಬಿಜೆಪಿ, ಯಡಿಯೂರಪ್ಪನವರನ್ನು 'ದುರಂತ ನಾಯಕ'ನನ್ನಾಗಿಸಿದೆ ಎಂದಿದೆ.
ಇನ್ನು ಮೈಸೂರಿನ ಅತ್ಯಾಚಾರ ಸಂತ್ರಸ್ತೆ ಸಂಜೆ ಹೊರಬಂದಿದ್ದೇ ತಪ್ಪು ಎಂದಿದ್ದು ಬಿಜೆಪಿ. ಚಾಂದಿನಿ ನಾಯ್ಕ್ ಮೇಲೆ ಹಲ್ಲೆ ನಡೆಸಿದ್ದು ಬಿಜೆಪಿ. ಮಹಿಳೆ ಗಂಡನ ಸೇವೆ ಮಾಡಿಕೊಂಡಿರಬೇಕು ಎಂಬ ಆರ್ಎಸ್ಎಸ್ ಸಿದ್ಧಾಂತವನ್ನು ಪ್ರತಿಪಾಧಿಸುವುದು ಬಿಜೆಪಿ. ರಮೇಶ್ ಜಾರಕಿಹೊಳಿಯಿಂದ ನೊಂದಾಕೆಯ ಮೇಲೆ ಅನ್ಯಾಯದ ಕಲ್ಲೆಸೆದಿದ್ದು ಬಿಜೆಪಿ ಎಂದು ಕಿಡಿಕಾರಿದೆ.