ಶ್ರೀನಗರ, ಮೇ 25 (DaijiworldNews/HR): ಕಿರುತೆರೆ ನಟಿಯೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದು, ದಾಳಿಯಲ್ಲಿ ನಟಿಯ ಸೋದರಳಿಯ 10 ವರ್ಷದ ಬಾಲಕ ಕೂಡ ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ನಡೆದಿದೆ.
ಈ ಕುರಿತು ಕಾಶ್ಮೀರ ವಲಯ ಪೊಲೀಸರು ಮಾಹಿತಿ ನೀಡಿದ್ದು, ಲಷ್ಕರ್-ಇ-ತೊಯಿಬಾ ಉಗ್ರರು ಅಮ್ರೀನ್ ಭಟ್ ಎಂಬ ಮಹಿಳೆಯ ಮನೆಯ ಮೇಲೆ ಗುಂಡು ಹಾರಿಸಿದ್ದು, ಗಾಯಗೊಂಡ ಸ್ಥಿತಿಯಲ್ಲಿ ಆಕೆಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿರುವುದಾಗಿ ತಿಳಿಸಿದ್ದಾರೆ.
ಮೃತ ಅಮ್ರೀನ್ ಭಟ್ ಟಿಕ್ಟಾಕ್ ಕಲಾವಿದೆ ಮತ್ತು ಕಿರುತೆರೆ ನಟಿಯಾಗಿದ್ದು, ಘಟನೆಯಲ್ಲಿ ಮಹಿಳೆಯ ಸೋದರಳಿಯ ಫರ್ಹಾನ್ ಜುಬೈರ್ ಕೂಡ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.