ಸೇಲಂ (ತಮಿಳುನಾಡು), ಮೇ 25 (DaijiworldNews/DB): ಕಳೆದ 34 ವರ್ಷಗಳಿಂದ ಜೈಲುವಾಸಿಯಾಗಿದ್ದ ಕಾಡುಗಳ್ಳ ವೀರಪ್ಪನ್ ಅಣ್ಣ ಮಾದಯ್ಯನ್ ಸೇಲಂ ಹೃದಯಾಘಾತಕ್ಕೊಳಗಾಗಿ ಇಂದು ಜೈಲಿನಲ್ಲಿ ಅಸುನೀಗಿದ್ದಾನೆ.
ಈತನಿಗೆ 80 ವರ್ಷ ವಯಸ್ಸಾಗಿತ್ತು. 1987ರಲ್ಲಿ ಅರಣ್ಯ ಸಿಬಂದಿ ಚಿದಂಬರಂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈರೋಡ್ನ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಮೊದಲು ಈತ ಮೈಸೂರಿನಲ್ಲಿ ಜೈಲು ಶಿಕ್ಷೆಯಲ್ಲಿದ್ದ. ಬಳಿಕ ಕೊಯಮತ್ತೂರು,ಆನಂತರ ಸೇಲಂ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಆತನಿಗೆ ಮೇ ಮೊದಲ ವಾರದಲ್ಲಿ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾನೆ.