ಗೌರಿಬಿದನೂರು, ಮೇ 25 (DaijiworldNews/DB): ವಿವಾಹದ ಮುಹೂರ್ತ ಸಂದರ್ಭದಲ್ಲಿ ವಧು ನಾಪತ್ತೆಯಾಗಿ ಮದುವೆ ಮುರಿದು ಬಿದ್ದ ಘಟನೆ ಗೌರಿಬಿದನೂರು ತಾಲೂಕಿನ ವಿಧುರಾಶ್ವತ್ಥ ಗ್ರಾಮದ ಚನ್ನರಾಯಪ್ಪ ಕಲ್ಯಾಣ ಮಂಟಪಲ್ಲಿ ನಡೆದಿದೆ.
ಗೌರಿಬಿದನೂರಿನ ನಾಗಿರೆಡ್ಡಿ ಬಡಾವಣೆಯ ನಿವಾಸಿಯಾಗಿದ್ದ 22 ವರ್ಷದ ವಧುವಿನ ಮದುವೆ ಗೌರಿಬಿದನೂರಿನ ಕರೇಕಲ್ಲಹಳ್ಳಿ ನಿವಾಸಿಯಾಗಿರುವ ಸುರೇಶ್ ಜೊತೆ ಇಂದು ನಿಗದಿಯಾಗಿತ್ತು. ಬೆಳಗ್ಗೆ 9.30ಕ್ಕೆ ಮುಹೂರ್ತದ ವೇಳೆ ಹುಡುಕಾಡಿದರೂ ವಧು ಸಿಗಲಿಲ್ಲ. ಪ್ರಿಯಕರ ಪ್ರವೀಣ್ ಜೊತೆ ಆಕೆ ನಾಪತ್ತೆಯಾಗಿರುವ ಶಂಕೆ ಇದೀಗ ವ್ಯಕ್ತವಾಗಿದೆ.
ಮಂಗಳವಾರ ರಾತ್ರಿ ನಡೆದ ಅರತಕ್ಷತೆಯಲ್ಲಿ ಆಕೆ ಭಾಗಿಯಾಗಿದ್ದಳು. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ವಧುವಿನ ಮನೆಯವರು ನಿರ್ಧರಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದಷ್ಟೇ ಮುಹೂರ್ತದ ವೇಳೆ ಕುಸಿದು ಬಿದ್ದ ನಾಟಕವಾಡಿದ್ದ ವಧು ಬಳಿಕ ಮದುವೆ ಒಲ್ಲೆ ಎಂದ ಕಾರಣ ಮದುವೆ ರದ್ದಾದ ಘಟನೆ ಮೈಸೂರಿನಲ್ಲಿ ನಡೆದಿತ್ತು.