ಬೆಂಗಳೂರು, ಮೇ 25 (DaijiworldNews/MS): ಬಿಜೆಪಿ ಸರ್ಕಾರವು ಶಾಲೆಗಳನ್ನು, ಮಕ್ಕಳ ಮನಸ್ಸನ್ನು ರಾಜಕೀಯ ಪ್ರಯೋಗ ಶಾಲೆ ಮಾಡಿಕೊಳ್ಳುತ್ತಿದೆ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಬಿಜೆಪಿಗೆ ಮಕ್ಕಳು ಶಿಕ್ಷಿತರಾಗುವುದಕ್ಕಿಂತ, ಶೈಕ್ಷಣಿಕ ರೋಬೊಟ್ಗಳಾಗಬೇಕಿದೆ ಎಂದು ಟ್ವೀಟ್ ಮಾಡಿ ಮೂಲಕ ಕಿಡಿ ಕಾರಿರುವ ಇವರು, ಗ್ರಾಮಗಳು ಶಿಕ್ಷಿತವಾದರೆ ರಾಜ್ಯ ಶಿಕ್ಷಿತವಾಗುತ್ತದೆ, ರಾಜ್ಯ ಶಿಕ್ಷಿತವಾದರೆ ದೇಶ ಸುಶಿಕ್ಷಿತವಾಗುತ್ತದೆ ಆದರೆ ಬಿಜೆಪಿ ಶಾಲೆ ಶುರುವಾದರೂ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಿಲ್ಲ, ಸೈಕಲ್ ನೀಡಿಲ್ಲ ಎಂದು ಹೇಳುವ ಮೂಲಕ ಬಿಜೆಪಿಯ ನಡೆಯನ್ನು ಪ್ರಶ್ನಿಸಿದ್ದಾರೆ.
ಅಲ್ಲದೇ ಬಿಸಿಯೂಟ ಯೋಜನೆ ಹಳ್ಳ ಹಿಡಿದಿದೆ, ಪಠ್ಯಪುಸ್ತಕ ಸಂಪೂರ್ಣ ವಿತರಣೆ ಇಲ್ಲ, ಶಾಲೆಗಳಿಗೆ ಮೂಲಸೌಕರ್ಯವಿಲ್ಲ, ಶಿಕ್ಷಕರ ಕೊರತೆ ನೀಗಿಸಲಿಲ್ಲ ಕಲಿಕಾ ಸಾಮಗ್ರಿಗಳಿಲ್ಲ ಶೈಕ್ಷಣಿಕ ಸೌಕರ್ಯ ಒದಗಿಸುವ ಬದಲು ಸಂಘದ ಸೂಚನೆಯಂತೆ ರಾಜಕೀಯ ಸಿದ್ದಾಂತ ತುಂಬಿಸಲು ಹವಣಿಸುತ್ತಿದೆ ಬಿಜೆಪಿಗೆ ಮಕ್ಕಳು ಶಿಕ್ಷಿತರಾಗುವುದಕ್ಕಿಂತ, ಶೈಕ್ಷಣಿಕ ರೋಬೊಟ್ಗಳಾಗಬೇಕಿದೆ ಎಂದು ದೂರಿದ್ದಾರೆ.
ಬಿಜೆಪಿ ಕಾಂಗ್ರೆಸ್ ನಡುವಣ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಿಂದ ಬೇಸತ್ತ ಕೆಲವು ಲೇಖಕರು ತಮ್ಮ ಬರಹಗಳನ್ನು ಪಠ್ಯಪುಸ್ತಕಗಳಿಂದ ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.